ಬೆಂಗಳೂರು:ಬೆಂಗಳೂರು, ತಿರುವನಂತಪುರ ಹಾಗೂ ತಮಿಳುನಾಡು ವೆಲ್ಲೂರಿನಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ NCB ಅಧಿಕಾರಿಗಳು, ಬೃಹತ್ ಡ್ರಗ್ ಜಾಲ ಪತ್ತೆ ಮಾಡಿ ಆರು ಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಗಳು ಕೊರಿಯರನಲ್ಲಿ ಚುವಿಂಗ್ ಗಮ್ ಚಾಕಲೇಟ್ ಮೂಲಕ ಡ್ರಗ್ಸ್ ಸಾಗಾಟ ಮಾಡುತ್ತಿದ್ದರು. ಬಂಧಿತರಿಂದ 244 ಗ್ರಾಂ. ಆಂಫೆಟಮೈನ್, 25 ಎಲ್ ಎಸ್ ಡಿ, ಸ್ಟಾಪ್ ಗಳು, 2 ಗ್ರಾಂ ಮೆಥಾಕ್ವಾಲೋನ್, 44 ಗ್ರಾಂ ಮೇಂಥಾ ಫೆಟಮೈನ್ 212 .5 ಕೆ.ಜಿ. ಗಾಂಜಾ, 2 ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಂಗಳೂರಿನಿಂದ ಕೊರಿಯರ್ ಮೂಲಕ ತಿರುವನಂತಪುರ ಕಡೆಗೆ ಆಂಫೆಟಮೈನ್ ಹೆಸರಿನ ಡ್ರಗ್ಸ್, ಸಾಗಾಟ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ವಿಭಾಗದ ಎನ್‌ಸಿಬಿ ಅಧಿಕಾರಿಗಳು ತಿರುವಂತಪುರ ಉಪ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ದಾಳಿ ನಡೆಸಿದಾಗ ಚುವಿಂಗ್ ಗಮ್, ಹಾಗೂ ಚಾಕಲೇಟ್ ಪೇಪರ್ ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದಿಂದ ತಮಿಳುನಾಡು ಕಡೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಮಾಹಿತಿ ಮೇರೆಗೆ ಚೆನ್ನೈ ವಿಭಾಗದ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿ 212 ಕೆ.ಜಿ. ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ತೆಂಗಿನ ಸಸಿ ಮಣ್ಣಿನಲ್ಲಿ ಸಣ್ಣ-ಸಣ್ಣ ಪ್ಯಾಕೇಟ್ ಗಳಲ್ಲಿ ಗಾಂಜಾ ಇಟ್ಟುಕೊಂಡು ವಾಹನದ ಮುಖಾಂತರ ಈರೋಡ್ ನಲ್ಲಿರುವ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಇಬ್ಬರು ಆರೋಪಿಗಳು ಬಂಧಿಸಲಾಗಿದೆ.
ಅದೇ ರೀತಿ ಕೇರಳದಿಂದ ಬೆಂಗಳೂರಿಗೆ ಕೊರಿಯರ್ ಮೂಲಕ 40 ಗ್ರಾಂ ಮೆಥಾಂಪೈಟಮೈನ್ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಬೆಂಗಳೂರು ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
PublicNext
21/11/2021 03:19 pm