ಚಿಕ್ಕಮಗಳೂರು: ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಿನ್ನೆ ಮಹಿಳೆಯರು ನಮ್ಮೂರಿಗೆ ಬಾರ್ ಬೇಡ ಎಂದು ಬಾರ್ ಗೆ ನುಗ್ಗಿ ಚಯರ್ ಪುಡಿ ಪುಡಿ ಮಾಡಿ ದಾಂಧಲೆ ನಡೆಸಿದಿದ್ದರು,ಈ ಹಿನ್ನಲೆ ಇಂದು ಬೆಳಗ್ಗೆ ಅಪ್ರಾಪ್ತ ಬಾಲಕ, ಮೂವರು ಮಹಿಳೆಯರು ಸೇರಿ 7 ಜನರನ್ನ ಖಾಕಿ ಪಡೆ ಎಳೆದೊಯ್ದಿದ್ದಾರೆ.
ಬೆಳ್ಳಂಬೆಳಗ್ಗೆ ಮನೆ ಬಾಗಿಲು, ಹೆಂಚು ಮುರಿದು ಪೊಲೀಸರು ಒಳಗೆ ನುಗ್ಗಿ ಗೂಂಡಾ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಒಂದೇ ಮನೆಯ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.ಈ ಸಂಬಂಧ ಪಿಎಸೈ ರಮ್ಯಾ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
PublicNext
15/11/2021 01:57 pm