ಮುಂಬೈ: ಕಳೆದ ಆರು ತಿಂಗಳ ಅವಧಿಯಲ್ಲಿ 16 ವರ್ಷದ ಬಾಲಕಿಯ ಮೇಲೆ 400 ಮಂದಿ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ದೂರ ದಾಖಲಿಸಲು ಠಾಣೆಗೆ ಬಂದರೆ ಪೊಲೀಸರು ಕೂಡ ಲೈಂಗಿಕ ಶೋಷಣೆ ಮಾಡಿದ್ದಾರೆ ಅನ್ನೋ ದೂರು ಕೇಳಿಬಂದಿದೆ. ಮತ್ತೊಂದು ವಿಪರ್ಯಾಸ ಏನಂದ್ರೆ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಈಗ 2 ತಿಂಗಳ ಗರ್ಭಿಣಿ ಆಗಿದ್ದಾಳೆ.
ಸಂತ್ರಸ್ತ ಬಾಲಕಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಇತ್ತ ತಂದೆ ಮಗಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕೆಂದು, ಹಿಂದೆ ಮುಂದೆ ನೋಡದೇ ವರನನ್ನು ತಂದು ಮದುವೆ ಮಾಡಿದ್ದ. ಬಳಿಕ ಆ ಬಾಲಕಿ ಗಂಡನ ಮನೆ ಸೇರಿದ್ದಳು. ಆಕೆಯ ಗಂಡ 6 ತಿಂಗಳು ಕೆಲಸ ಟ್ರೈನಿಂಗ್ ಹಿನ್ನೆಲೆ ಬೇರೆ ಊರಿಗೆ ತೆರಳಿದ್ದ. ಇತ್ತ ಮನೆಯಲ್ಲೇ ಇರುತ್ತಿದ್ದ ಸೊಸೆ ಮೇಲೆಯೇ ಮಾವ ಕಣ್ಣು ಹಾಕಿದ್ದ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಇದಾದ ಬಳಿಕ ಯುವತಿ ಈ ವಿಚಾರವನ್ನು ಗಂಡನ ಬಳಿ ಹೇಳಿಕೊಳ್ಳಲಾಗದೇ ಕೆಲಸ ಹುಡುಕಿಕೊಂಡು ಅಂಬೆಜೋಗಿ ಪಟ್ಟಣಕ್ಕೆ ಬಂದಿದ್ದಳು. ಇಲ್ಲೂ ಕೂಡ ಆಕೆಗೆ ಕೆಲಸ ಕೊಡಿಸುವ ಆಸೆ ತೋರಿಸಿ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಬಳಿಕ ಕೆಲಸವು ಕೊಡಿಸದೇ ವಂಚನೆ ಮಾಡಿದ್ದಾರೆ. ಅವರಿಬ್ಬರನ್ನು ನಂಬಿ ಯುವತಿ ಮೋಸ ಹೋಗಿದ್ದಳು. ಕೆಲಸ ಕೊಡಿಸುವ ನೆಪದಲ್ಲಿ ಆಕೆ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ನಡೆದಿದ್ದು ನಿಜಕ್ಕೂ ದುರಂತ. ಆಕೆ ಮೇಲೆ ನಿರಂತರವಾಗಿ 400 ಮಂದಿ ಅತ್ಯಾಚಾರ ಮಾಡಿದ್ದಾರೆ. ಪೊಲೀಸರು ಕೂಡ ತಮ್ಮ ತೀಟೆ ತಿರಿಸಿಕೊಳ್ಳಲು ಆಕೆಯನ್ನು ಬಳಸಿಕೊಂಡಿದ್ದಾರೆ.
ಅತ್ತ ಗಂಡನಿಗೆ ಈ ವಿಚಾರ ತಿಳಿದು ದೂರ ನೀಡಿದ್ದಾನೆ. ಇತ್ತ ದಿಕ್ಕು ದೋಚದೆ ಈಕೆ ಕಂಗಾಲಗಿದ್ದಾಳೆ. ಆಕೆಯ ಜೀವನದಲ್ಲಿ ಊಹೆ ಮಾಡಿಕೊಳ್ಳದಂತಹ ಘಟನೆಗಳು ನಡೆದು ಹೋಗಿವೆ. ಮತ್ತೆ ಮರಳಿ ಹಿಂದೆ ಹೋಗಬೇಕೆಂದರೂ ಸಾಧ್ಯವಿಲ್ಲ. ದಿಕ್ಕು ತೋಚದೆ ಕಂಗಲಾಗಿದ್ದ ಯುವತಿಯನ್ನು ಮಕ್ಕಳ ಇಲಾಖೆ ಸಮಿತಿ ರಕ್ಷಿಸಿ, ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 400 ಮಂದಿ ಈಕೆ ಮೇಲೆ ಅತ್ಯಾಚಾರ ಮಾಡಿದ್ದು, ಕೇವಲ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
PublicNext
15/11/2021 09:30 am