ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತನ ಖಾತೆಯಿಂದ 2 ಕೋಟಿ ರೂ. ಅಕ್ರಮ ವಹಿವಾಟು: 40 ಲಕ್ಷ ರೂ. ತೆರಿಗೆ ಕಟ್ಟಲು ರೈತನಿಗೆ ನೋಟಿಸ್

ಬೆಂಗಳೂರು: ಬ್ಯಾಂಕ್ ಖಾತೆಯಿಂದ 2 ಕೋಟಿ ರೂ. ವಹಿವಾಟು ನಡೆದ ಹಿನ್ನೆಲೆಯಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರಿನ ರೈತ ಮುನಿರಾಜು ಎಂಬುವರು 40 ಲಕ್ಷ ರೂ. ತೆರಿಗೆ ಕಟ್ಟಬೇಕು ಎಂದು ನೋಟಿಸ್ ಸೂಚಿಸಲಾಗಿದೆ.

ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜುಗೆ ನೋಟಿಸ್ ಜಾರಿಯಾಗಿದೆ. ಹಸು ಲೋನ್ ಕೊಡಿಸುವುದಾಗಿ ಆಕ್ರಮ ವಹಿವಾಟು ಮಾಡಲಾಗಿತ್ತು. ಮುನಿರಾಜು ಬ್ಯಾಂಕ್ ಖಾತೆಯಲ್ಲಿ ಅಕ್ರಮ ವಹಿವಾಟು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಈಗ ರೈತ ಬಲಿಪಶುವಾಗಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ರೈತನಿಗೆ ಲೋನ್ ಕೊಡಿಸುವುದಾಗಿ ಝಾನ್ಸಿ ಎಂಬುವರು ತಿಳಿಸಿ ರೈತ ಮುನಿರಾಜು ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ವಂಚನೆ ಮಾಡಿದ್ದಾರೆ. ಅಲ್ಲದೆ 2 ಬಾರಿ ಝಾನ್ಸಿಗೆ ರೈತ ಮುನಿರಾಜು ಒಟಿಪಿ ಹೇಳಿದ್ದರಂತೆ. ಬಳಿಕ ಲೋನ್ ರಿಜೆಕ್ಟ್ ಆಗಿದೆ ಎಂದು ಝಾನ್ಸಿ ಹೇಳಿದ್ದಳು. ಇದಾದ ಬಳಿಕ ಜಿಎಸ್‌ಟಿ ಅಧಿಕಾರಿಗಳಿಂದ ನೋಟಿಸ್ ಬಂದಿದೆ. ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದೆ. 40 ಲಕ್ಷ ರೂ. ತೆರಿಗೆ ಕಟ್ಟಬೇಕು ಎಂದು ರೈತನಿಗೆ ನೋಟಿಸ್ ಬಂದಿದೆ. ಈ ಬಗ್ಗೆ ಬಾಗಲೂರು ಠಾಣೆಗೆ ಮುನಿರಾಜು ದೂರು ನೀಡಿದ್ದು, ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.

Edited By : Vijay Kumar
PublicNext

PublicNext

13/11/2021 09:36 pm

Cinque Terre

35.37 K

Cinque Terre

1

ಸಂಬಂಧಿತ ಸುದ್ದಿ