ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೇಯಸಿಯಿಂದಲೇ ಹತ್ಯೆಯಾಗಿದ್ದ ಕೋಟ್ಯಾಧಿಪತಿ: ಟಿಕ್ ಟಾಕ್ ಲವರ್ ಸಹಿತ ಹಲವರ ಬಂಧನ

ಬೆಂಗಳೂರು: ಕಳೆದೈದು ದಿನಗಳ ಹಿಂದೆ ನಡೆದ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಲ್ಲದೆ ತಾನೇ ಪತಿಯ ಕೊಲೆ ಮಾಡಿದ್ದೇನೆ ಅಂತ ಪೊಲೀಸರಿಗೆ ಶರಣಾಗಿದ್ದ ಆರೋಪಿ ಎರಡನೇ ಪತ್ನಿ ಮಾತ್ರ ಅಲ್ಲ, ಕೃತ್ಯದಲ್ಲಿ‌ ಆಕೆಯೊಂದಿಗೆ ಮತ್ತಿಬ್ಬರು ಶಾಮೀಲಾಗಿದ್ದರು. ಸದ್ಯ ಈ ಆರೋಪಿಗಳನ್ನ ಬಂಧಿಸುವ ಮೂಲಕ ಮಾದನಾಯಕನಹಳ್ಳಿ ಪೊಲೀಸ್ರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಅಷ್ಟಕ್ಕೂ ಆ ಇಬ್ರು ಯಾರು, ಕೊಲೆ ನಡೆದಿದ್ದಕ್ಕೆ ಕಾರಣ ಏನು ಅಂತೀರಾ, ಈ ಸ್ಟೋರಿ ನೋಡಿ.

ಕಳೆದ ಶನಿವಾರ ಬೆಂಗಳೂರಿನ ಉತ್ತರ ತಾಲೂಕು‌ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಕ್ಯಾತನಹಳ್ಳಿ ಗ್ರಾಮದ ಈ ಬೃಹತ್ ಬಂಗಲೆಯಲ್ಲಿ ಪತ್ನಿಯೇ ಪತಿಯನ್ನ ಹತ್ಯೆಗೈದ ಘಟನೆ ನಡೆದಿತ್ತು. ಹೌದು. ಹೀಗೆ ಮೊಬೈಲ್‌ನಲ್ಲಿ ಟಿಕ್ ಟಾಕ್, ಬರ್ತಡೇ ಪಾರ್ಟಿ ವೀಡಿಯೋಗಳಲ್ಲಿ ಚಿಣಿಮಿಣಿಯಂತೆ ಫುಲ್ ಮೇಕಪ್ ಮಾಡ್ಕೊಂಡು ಶೋ ಕೊಡ್ತಿರೋ ಇವಳು ಈಗ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾಳೆ.

ಕಳೆದ ಶನಿವಾರ ರಾತ್ರಿ ಈ ನೇತ್ರಾ ಅಲಿಯಾಸ್ ರಚ್ಚು ತನ್ನ ಪತಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಆದ ಸ್ವಾಮಿರಾಜ್ ನನ್ನು ಕೊಂದು ನಾನೊಬ್ಬಳೆ ಕೊಲೆ ಮಾಡಿದ್ದೇನೆ, ನನಗೆ ನನ್ನ ಗಂಡ ಬೇರೆಯವರೊಂದಿಗೆ ಮಂಚ ಹಂಚಿಕೋ ಅ‌ಂತ ಮಾನಸಿಕವಾಗಿ, ಲೈಂಗಿಕವಾಗಿ ಕಿರುಕುಳ ನೀಡ್ತಿದ್ದ. ಹೀಗಾಗಿ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದೇನೆ ಅಂತ ಪೊಲೀಸರಿಗೆ ಶರಣಾಗಿದ್ದಳು.

ಈ ಸಂಬಂಧ ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ ಮಾದನಾಯಕನಹಳ್ಳಿ ಪೊಲೀಸರಿಗೆ ಮೃತ ಸ್ವಾಮಿರಾಜ್ ಗೆ ಈಕೆ ಎರಡನೇ ಹೆಂಡತಿ, ಈಗಾಗಲೆ ಸ್ವಾಮಿರಾಜ್ ಗೆ ಮದುವೆಯಾಗಿ ಇಬ್ರು ಮಕ್ಕಳಿದ್ದಾರೆ ಅನ್ನೋ ವಿಚಾರ ತಿಳಿದು ಬಂತು. ಅಲ್ಲದೆ ಮೊದಲನೇ ಕುಟುಂಬದ ಜೊತೆ ಒಡನಾಟ ಇದ್ದಿದ್ದಕ್ಕೆ ಹಾಗೂ 4 ಕೋಟಿ ಮೌಲ್ಯದ ಭವ್ಯ ಬಂಗಲೆ ಸೇರಿದಂತೆ ಆಸ್ತಿ ಲಪಟಾಯಿಸಲು ಕೊಲೆ ಮಾಡಲಾಗಿದೆ ಅಂತ ಮೊದಲನೇ ಪತ್ನಿ ಸತ್ಯಕುಮಾರಿ ಆರೋಪಿಸಿದ್ರು.

ಇನ್ನೂ ಪೊಲೀಸ್ರಿಗೆ ಶರಣಾಗಿದ್ದ ನೇತ್ರಾ ಸಹಿತ ನೇತ್ರಾಳ ಪ್ರಿಯಕರ ಭರತ್ ಹಾಗೂ ವಿಜಯ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರೋ ಮಾದನಾಯಕನಹಳ್ಳಿ ಪೊಲೀಸರು ಸದ್ಯ ಆರೋಪಿಗಳನ್ನ ಕಂಬಿ ಎಣಿಸಲು ಜೈಲಿಗಟ್ಟಿದ್ದಾರೆ..

ಮಲ್ಲಿಕ್ ಬೆಳಗಲಿ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Shivu K
PublicNext

PublicNext

13/11/2021 04:02 pm

Cinque Terre

56.93 K

Cinque Terre

1