ಬೆಂಗಳೂರು: ಮಹಿಳೆಯೊಬ್ಬಳು ತನ್ನ ಪತಿಯನ್ನ ರಾಡ್‌ನಿಂದ ಹತ್ಯೆಗೈದು ಬಳಿಕ ಠಾಣೆ ಬಂದು ಶರಣಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿಯಲ್ಲಿ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್(46) ಹತ್ಯೆಯಾದ ವ್ಯಕ್ತಿ. ಆತನ ಎರಡನೇ ಪತ್ನಿ ನೇತ್ರಾ (35) ಕೊಲೆ ಮಾಡಿದ ಆರೋಪಿ. ಕೃತ್ಯದ ಬಳಿಕ ಆರೋಪಿ ನೇತ್ರಾ ಮಾದನಾಯಕನಹಳ್ಳಿ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾಳೆ.
'ನನ್ನ ಪತಿ ಸ್ವಾಮಿರಾಜ್, ಹತ್ತಿರದ ಸಂಬಂಧಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಲು ಹಿಂಸೆ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದೇನೆ' ಎಂದು ನೇತ್ರಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ಆದರೆ ಮೃತ ಸ್ವಾಮಿರಾಜ್‌ನ ಮೊದಲ ಪತ್ನಿ ಸತ್ಯಕುಮಾರಿ, 'ಪತಿ ಸ್ವಾಮಿರಾಜ್‌ನನ್ನು ಆಸ್ತಿಗಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ'. ಜೊತೆಗೆ ಈ ಸಂಬಂಧ 2ನೇ ಪತ್ನಿ ನೇತ್ರಾ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
PublicNext
07/11/2021 03:19 pm