ಹುಬ್ಬಳ್ಳಿ: ಗಂಡನೇ ನನ್ನ ಕೊಲೆ ಮಾಡಿಸಲು ಸುಪಾರಿ ಕೊಡುವುದಾಗಿ ಜೀವ ಬೆದರಿಕೆ ಹಾಕಿದ ಬಗ್ಗೆ ಗಂಡನ ವಿರುದ್ಧ ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಡಾ.ಶೋಭಾ ಸುಣಗಾರ ಅವರು ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಗಂಡನ ವಿರುದ್ಧ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಗಂಡನಿಂದ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಿದ್ದೇನೆ. ಸುಮಾರು ಇಪ್ಪತ್ತು ವರ್ಷಗಳ ದಾಂಪತ್ಯ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದೇನೆ. ಅಲ್ಲದೇ ನನ್ನ ಹೆಸರನ್ನು ಹಾಳು ಮಾಡಲು ಡಾ.ಕ್ರಾಂತಿಕಿರಣ ಅವರು ಸಾಕಷ್ಟು ಷಡ್ಯಂತ್ರ ರೂಪಿಸಿದ್ದಾರೆ. ಆದ್ದರಿಂದ ಈಗ ಸಾಕಷ್ಟು ಮನನೊಂದು ದೂರನ್ನು ನೀಡಿದ್ದೇನೆ ಎಂದರು.
ಡಾ.ಕ್ರಾಂತಿಕಿರಣ ಅವರ ಅನೈತಿಕ ಹಾಗೂ ಅಕ್ರಮ ಸಂಬಂಧಗಳ ಬಗ್ಗೆ ನನಗೆ ಗೊತ್ತಾದ ಹಿನ್ನಲೆಯಲ್ಲಿ ಹೇಗಾದರೂ ಮಾಡಿ ನನ್ನನ್ನು ದೂರ ಮಾಡಬೇಕು ಎಂದು ಹಾಗೂ ಯಾವುದೇ ಆಸ್ತಿಯನ್ನು ಕೊಡದೇ ಹೊರ ಹಾಕಬೇಕು ಎಂದು ಸಾಕಷ್ಟು ಸಂಚು ರೂಪಿಸಿದ್ದಾರೆ ಎಂದು ಅವರು ಹೇಳಿದರು.
PublicNext
01/11/2021 09:00 pm