ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಸಾವಿಗೆ ಕಾರಣವಾದ್ರು ಏನು?.. : ಸತಿ ಪತಿ ಆತ್ಮಹತ್ಯೆ

ವಿಜಯನಗರ: ಅವರಿಬ್ಬರು ಇತ್ತೀಚೆಗಷ್ಟೇ ಮದುವೆಯಾಗಿ ಸುಂದರ ಬದುಕು ನಡೆಸುತ್ತಿದ್ದರು. ಎಲ್ಲವೂ ಸರಿ ಇದ್ದಾಗಲೇ ಸಾಯುವ ನಿರ್ಧಾರ ತೆಗೆದುಕೊಳ್ಳುವಂತಹ ಸಮಸ್ಯೆಯಾದ್ರು ಏನಿತ್ತು ಎನ್ನುವುದೇ ಯಕ್ಷ ಪ್ರಶ್ನೆ.ಹೌದು 6 ತಿಂಗಳ ಹಿಂದೆ ಮದುವೆಯಾದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

ಮೃತ ದಂಪತಿಯನ್ನು ರಾಮು ಮತ್ತು ಹೇಮಾ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ರಾಮು ಜೆಸಿಬಿ ಆಪರೇಟರ್ ಕೆಲ ದಿನಗಳ ನಂತರ ಗಂಡ ಹೆಂಡತಿಯನ್ನು ಭೇಟಿಯಾಗಿ ಮತ್ತೆ ಕೆಲಸಕ್ಕೆಂದು ಹೊರ ಹೋದ ಕೆಲವೇ ಕ್ಷಣಗಳಲ್ಲಿ ಹೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇತ್ತ ಪತ್ನಿಯ ಸಾವಿನ ಸುದ್ದಿ ತಿಳಿದ ರಾಮು ಸಹ ಮರವೊಂದಕ್ಕೆ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾನೆ.

ಈ ಘಟನೆ ಗ್ರಾಮಸ್ಥರಿಗೆ ಶಾಕ್ ಕೊಟ್ಟಿದೆ. ಆತ್ಮಹತ್ಯೆಗೆ ಕಾರಣವೆನ್ನೇನುವುದು ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದೆ.

Edited By : Nirmala Aralikatti
PublicNext

PublicNext

01/11/2021 08:14 am

Cinque Terre

53.86 K

Cinque Terre

3

ಸಂಬಂಧಿತ ಸುದ್ದಿ