ಹಾಸನ : ಇಂಜಿನಿಯರಿಂಗ್ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹೇಮಂತ್ ಗೌಡ (20) ಮೃತ ದುರ್ದೈವಿ. ಇಂದಿನ ಶಿಕ್ಷಣ ವ್ಯವಸ್ಥೆ ಇದ್ರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಕುಲಪತಿಗಳು, ಎಲ್ಲ ಪಕ್ಷದ ಗಣ್ಯರು ಈ ವ್ಯವಸ್ಥೆ ಬದಲಾವಣೆಗೆ ಬೆಂಬಲ ಕೊಡಬೇಕೆಂದು ಹೇಮಂತ್ ಮನವಿ ಮಾಡಿಕೊಂಡಿದ್ದಾನೆ.
ವೀಡಿಯೋದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕೆಂದು ಯುವಕ ಒತ್ತಾಯಿಸಿದ್ದಾನೆ. ಸೂಸೈಡ್ ಮುನ್ನ ಮಾಡಿದ ವಿಡಿಯೋ ಇದೀಗ ಎಲ್ಲೇಡೆ ವೈರಲ್ ಆಗಿದೆ.
ನನ್ನ ಸುಟ್ಟರೆ ಬೂದಿಯಾಗುತ್ತೆ, ಮಣ್ಣು ಮಾಡಿದರೆ ಕೊಳೆಯುತ್ತದೆ. ಆದ್ದರಿಂದ, ನನ್ನ ಅಂಗಾಂಗಳನ್ನು ದಾನ ಮಾಡಿ. ಜಗದ್ಗುರು ಶ್ರೀ ನಿರ್ಮಲಾನಂಧನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನನ್ನ ಅಂತ್ಯಕ್ರಿಯೆ ನಡೆಯಬೇಕು. ಅಪ್ಪ-ಅಮ್ಮ ನಿಮ್ಮ ಪ್ರೀತಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.
PublicNext
26/10/2021 12:58 pm