ಬೆಂಗಳೂರು: ಅಕ್ರಮವಾಗಿ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರಂನ ವೆಳ್ಳಿಪುರಂ ಸೇತುವೆ ಬಳಿ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಪುನೀತ್ ಕುಮಾರ್ (27), ಮಧುಕುಮಾರ್ (27), ನಂದೀಶ್ (34), ಯೋಗೇಶ್ (32), ಗೋಪಾಲ್ (39) ಎಂಬುವವರೇ ಬಂಧಿತ ಆರೋಪಿಗಳು.
ಬಂಧಿತರಿಂದ ₹17 ಕೋಟಿ ಮೌಲ್ಯದ 17 ಕೆ.ಜಿ ಅಂಬರ್ ಗ್ರೀಸ್ ವಶಕ್ಕೆ ಪಡೆದ ಪೊಲೀಸರು ಆರೋಪಿಗಳನ್ನ ವಿಚಾರಣೆ ನಡೆಸಿದ್ದಾರೆ. ಎ6 ಆರೋಪಿ ಗೋಪಾಲನ ಮನೆಯಲ್ಲಿ 13 ಕೆ.ಜಿ ಅಂಬರ್ ಗ್ರೀಸ್ ಇಟ್ಟಿರೋದಾಗಿ ಮಾಹಿತಿ ಇದೆ. ಪ್ರಕರಣದ ಎ1 ಆರೋಪಿ ಪ್ರಸನ್ನ ತಲೆಮರೆಸಿಕೊಂಡಿದ್ದಾನೆ. ಪ್ರಸನ್ನನಿಗಾಗಿ ಮಲ್ಲೆಶ್ವರಂ ಪೊಲೀಸರು ಬಲೆ ಬೀಸಿದ್ದಾರೆ. ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
PublicNext
21/10/2021 07:03 pm