ಕೊಡಗು : ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಾ ಜಗತ್ತನ್ನೇ ಮರೆತ್ತಿದ್ದ ಜೋಡಿ ಮಧ್ಯೆ ವೈಮನಸ್ಸು ಶುರುವಾಗಿದೆ. ಪ್ರೀತಿಸಿದಾಕೆ ಕೈಕೊಡುತ್ತಿದ್ದಂತೆ ಪ್ರಿಯಕರ ಸಾವಿನ ಮನೆ ಸೇರಿದ್ದಾನೆ. ಹೌದು ಎಂಟು ವರ್ಷಗಳಿಂದ ಒಂದೇ ಜೀವ ಎರಡು ದೇಹ ಎನ್ನುವಂತೆ ಅಮರ ಪ್ರೇಮಿಗಳು. ಇತ್ತೀಚೆಗೆ ಪ್ರಿಯತಮೆ ತನ್ನ ಪ್ರೇಮಿಯನ್ನು ನಿರಾಕರಿಸಲು ಮುಂದಾದಳು.
ನಿನ್ನನ್ನು ವರಿಸಿದರೆ ನನಗೆ ಕಣ್ಣೀರೇ ಗತಿ ಎಂದಳು ಪ್ರೀತಿಸಿದಾಕೆಯಿಂದ ಇಂತಹ ಮಾತುಗಳನ್ನು ಕೇಳಿದ ಪ್ರಿಯಕರ ಕುಣಿಕೆಗೆ ಕೊರಳೊಡ್ಡಿದ್ದಾನೆ. 28 ವರ್ಷದ ದರ್ಶನ್ ನೇಣಿಗೆ ಜೀವಬಿಟ್ಟವ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಸುಳುಗೋಡಿನ ಶಿವದಾಸ್ ಮತ್ತು ಶಾರದ ದಂಪತಿಯ ಒಬ್ಬನೇ ಮಗ ದರ್ಶನ್.
ದರ್ಶನ್ ಪಕ್ಕದ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಈ ಪ್ರೀತಿಯ ವಿಷಯ ಎರಡು ಮನೆಗಳಿಗೂ ಗೊತ್ತಾಗಿದೆ. ಈ ವೇಳೆ ಯುವತಿಯ ತಂದೆ ತಾಯಿಗಳು ವಿರೋಧ ವ್ಯಕ್ತಪಡಿಸಿದ್ದರಂತೆ. ಆದರೆ ಒಬ್ಬನೇ ಮಗನಾಗಿದ್ದರಿಂದ ಮತ್ತು ಇಬ್ಬರು ಮಲಯಾಳಿ ಹಿಂದೂಗಳಾಗಿದ್ದರಿಂದ ದರ್ಶನ್ ತಂದೆ ಶಿವದಾಸ್ ಯುವತಿಯ ಮನೆಗೆ ಹೋಗಿ ಮಾತನಾಡಿದ್ದರಂತೆ. ಕೊನೆಗೆ ದರ್ಶನ್ ಗೆ ಮಗಳನ್ನು ಕೊಟ್ಟು ಮದುವೆ ಮಾಡುವುದಕ್ಕೆ ಯುವತಿ ಪೋಷಕರು ಒಪ್ಪಿದ್ದರಂತೆ.
ಇತ್ತೀಚೆಗೆ ಪೋಷಕರ ಮತ್ತು ಸಂಬಂಧಿಕರ ಮಾತಿಗೆ ಸೋತಿದ್ದ ಯುವತಿ 'ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಪ್ರಿಯಕರ ದರ್ಶನ್ ಹೇಳಿದ್ದಾಳೆ. ನಾಲ್ಕು ದಿನಗಳ ಹಿಂದೆ ಯುವತಿ ತಾಯಿಗೆ ವಿಡಿಯೋ ಕಾಲ್ ಮಾಡಿದ್ದ ದರ್ಶನ್ "ನಾನು ಸಾಯುತ್ತಿದ್ದೇನೆ" ಎಂದು ಹೇಳಿದ್ದಾನೆ.
ಈ ವಿಚಾರವನ್ನು ದರ್ಶನ್ ತಾಯಿ ಶಾರದಾಗೆ ಯುವತಿಯ ತಾಯಿಯೇ ಕಾಲ್ ಮಾಡಿ ಹೇಳಿದ್ದರಂತೆ. ಕೂಡಲೇ ದರ್ಶನ್ ಮನೆಯವರು ಎಷ್ಟೇ ಕಾಲ್ ಮಾಡಿದ್ರೂ ದರ್ಶನ್ ಫೋನ್ ರಿಸೀವ್ ಮಾಡಿಲ್ಲ.ಯುವತಿ ಮತ್ತು ಆಕೆಯ ಕುಟುಂಬದವರ ವಿರುದ್ಧ ಕೊಡಗು ಎಸ್ಪಿಗೆ ಡೆತ್ ನೋಟ್ ಬರೆದಿಟ್ಟ ದರ್ಶನ್ ತನ್ನ ಪ್ರೀತಿಯ ಪ್ರಪಂಚವನ್ನು ಬಿಟ್ಟು, ನೇಣಿಗೆ ಕೊರಳೊಡ್ಡಿ ಇಹಲೋಕವನ್ನು ತ್ಯಜಿಸಿದ್ದಾನೆ.
ದರ್ಶನ್ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಕಾರಣವಾದ ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಎನ್ನೋದು ಸಂಬಂಧಿಕರ ಆಗ್ರಹ.
PublicNext
20/10/2021 10:02 pm