ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕೃಷ್ಣಾ ನದಿಗೆ ಬರುತ್ತಿದೆ ಕಾರ್ಖಾನೆಯ ಕಲುಷಿತ ನೀರು! ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಬೆಳಗಾವಿ: ಜೀವಜಲ ಇಲ್ಲದೆ ಎಷ್ಟೋ ಕಡೆ ಹಾಹಾಕಾರ ಉಂಟಾಗಿದೆ. ಹನಿ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಜನ. ಆದರೆ ಕಾರ್ಖಾನೆಯ ನೀರು ಪವಿತ್ರ ಕೃಷ್ಣಾ ನದಿಗೆ ಬಿಡುವ ಮೂಲಕ, ಕಲುಷಿತ ನೀರಿನಿಂದ ಸಾವಿರಾರು ಜೀವರಾಶಿಗಳು ಬಲಿಯಾಗುತ್ತಿವೆ, ಅಷ್ಟೇ ಅಲ್ಲದೆ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ. ಅಷ್ಟಕ್ಕೂ ಆ ಕಾರ್ಖಾನೆ ಯಾವುದು ಅಂತೀರಾ? ಮುಂದೆ ನೋಡಿ....

ಹೌದು...ಊಟವಿಲ್ಲದೇ ಬದುಕಬಹುದು ಆದರೆ ನೀರು ಇಲ್ಲದೇ ಒಂದು ಇರುವೆಯೂ ಬದುಕಲು ಸಾಧ್ಯವಿಲ್ಲ. ಆದರೆ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಚಂದನ ಸಿರಾಗಾಂವಕರ ಮಾಲೀಕತ್ವದ, ದಿ ಉಗಾರ ಶುಗರ್ ಕಾರ್ಖಾನೆಯ ನೀರು, ಪವಿತ್ರ ಕೃಷ್ಣಾ ನದಿಗೆ ಬಿಟ್ಟು ಅಪವಿತ್ರವಾಗಿ ಮಾಡುತ್ತಿದ್ದಾರೆ. ರಾತ್ರಿ ವೇಳೆ ಕಾಲುವೆಯ ಮುಖಾಂತರ ಕೆಮಿಕಲ್ ಮಿಶ್ರಿತ ನೀರು ಕೃಷ್ಣ ನದಿಯ ಪಾಲಾಗುತ್ತಿದೆ.

ಅಲ್ಲಿನ ಜನ ದೂರನ್ನು ನೀಡಿದರು, ಸಹ ಯಾವ ಅಧಿಕಾರಿಯೂ ಕ್ಯಾರೇ ಎನ್ನುತ್ತಿಲ್ಲಾ. ಪೊಲ್ಯುಷನ್ ಬೋರ್ಡ್ ಅಧಿಕಾರಿಗಳಿಗೆ ದೂರು ನೀಡದಿರು, ಕಾಟಾಚಾರಕ್ಕೆ ಭೇಟಿ ನೀಡುತ್ತಾರೆ ಹೊರತು, ಯಾವುದೇ ರೀತಿ ಕ್ರಮ ಕೈಗೊಳ್ಳುವುದಿಲ್ಲಾ ಎಂದು ಅಲ್ಲಿನ ಜನ ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳ ಜಾಣ ಮೌನ ನೋಡಿದರೆ ಪ್ರಭಾವಿಗಳ ಹಿಡಿತಕ್ಕೊಳಗಾಗಿದ್ದಾರಾ? ಅಥವಾ ಲಂಚಕ್ಕೆ ಇವರ ಹಿಂದಿನ ಮನೆಯ ಬಾಗಿಲು ತೆರೆದಿದೆಯಾ ಎನ್ನುವ ಸಂಶಯ ಉಂಟಾಗುತ್ತಿದೆ.

ಒಟ್ಟಿನಲ್ಲಿ ಪ್ರಧಾನಮಂತ್ರಿ ಮೋದಿಯವರು, ಗಂಗಾ ತುಂಗಾ ನದಿಗಳ ಸ್ವಚ್ಛತೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ, ಹಾಗಾಗಿ

ಕೃಷ್ಣಾ ನದಿಯ ಪರಿಸ್ಥಿತಿಯನ್ನೊಮ್ಮೆ ನೋಡಿ ಅದರ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಸಾವಿರಾರು ಜೀವಗಳು ಕೃಷ್ಣೆಯ ಮೂಲಕ ಉಸಿರಾಡುತ್ತಿದ್ದಾರೆ. ಇಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಕೃಷ್ಣ ನದಿಯ ಸ್ವಚ್ಛತೆ ಕಾಪಾಡಿ, ಜನರನ್ನ ಸಾಂಕ್ರಾಮಿಕ ರೋಗದಿಂದ ರಕ್ಷಣೆ ಮಾಡಬೇಕೆಂಬುದು ಎಲ್ಲರ ಆಶಯ.

Edited By : Shivu K
PublicNext

PublicNext

15/10/2021 10:12 am

Cinque Terre

121.54 K

Cinque Terre

1