ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಕ್ಕಳನ್ನು ಕರೆದೊಯ್ಯಲು ಬೆಂಗಳೂರಿನಿಂದ ಧಾವಿಸಿದ ಪೋಷಕರು

ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿ ಮಂಗಳೂರಿನಲ್ಲಿ ಪತ್ತೆಯಾಗಿರುವ ನಾಲ್ವರು ಮಕ್ಕಳ ಪೋಷಕರು ಇದೀಗ ತಾನೇ ಪಾಂಡೇಶ್ವರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ಸೋಲದೇವನ ಹಳ್ಳಿ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂದಿಯೊಂದಿಗೆ ಆಗಮಿಸಿರುವ ಪೋಷಕರು ಮಕ್ಕಳನ್ನು ಕರೆದೊಯ್ಯಲು ಬಂದಿದ್ದಾರೆ‌. ಸಂಜೆ 6.30ರ ಸುಮಾರಿಗೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದಾರೆ.

ಪಾಂಡೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ರೇವತಿಯವರ ಜೊತೆಗೆ ಪೋಷಕರು ಮಾತುಕತೆ ನಡೆಸುತ್ತಿದ್ದಾರೆ. ಬಳಿಕ ಮಕ್ಕಳನ್ನು ಪೋಷಕರ ಸುಪರ್ದಿಗೆ ನೀಡಲಾಗುತ್ತೆ.ಅಮೃತ ವರ್ಷಿಣಿಯ ಅಣ್ಣ ಹಾಗೂ ರಾಯನ್ ಸಿದ್ಧಾಂತ್ ತಂದೆ ಮಾತ್ರ ಆಗಮಿಸಿದ್ದಾರೆ. ಉಳಿದ ಇಬ್ಬರು ಮಕ್ಕಳು ಅವರೊಂದಿಗೆ ಬೆಂಗಳೂರಿಗೆ ತೆರಳಲಿದ್ದಾರೆ.

Edited By : Manjunath H D
PublicNext

PublicNext

12/10/2021 07:11 pm

Cinque Terre

93.82 K

Cinque Terre

0