ಭೋಪಾಲ್: ಉತ್ತಮ ನೃತ್ಯಗಾರನಾಗಲು ವಿಫಲನಾದನೆಂಬ ಕಾರಣಕ್ಕೆ ಹದಿಹರೆಯದ ಹುಡುಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.
11ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಭಾನುವಾರ ರಾತ್ರಿ ರೈಲ್ವೇ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಬರೆದಿರುವ 'ಡೆತ್ ನೋಟ್' ಪತ್ತೆಯಾಗಿದ್ದು, ಆತನ ಕುಟುಂಬ ಮತ್ತು ಸ್ನೇಹಿತರು ಬೆಂಬಲ ನೀಡದ ಕಾರಣ ತನಗೆ ಉತ್ತಮ ನೃತ್ಯಗಾರನಾಗಲು ಸಾಧ್ಯವಾಗಿಲ್ಲ ಎಂದು ಬಾಲಕ ಬರೆದುಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ಆತ್ಮಹತ್ಯೆಯ ಪತ್ರದಲ್ಲಿ ಬಾಲಕನು ತನ್ನ ಮರಣದ ನಂತರ ಮ್ಯೂಸಿಕ್ ವೀಡಿಯೊ ಮಾಡಬೇಕೆಂದು ಹೇಳಿದ್ದಾನೆ. ಇದರಲ್ಲಿ ಅರಿಜಿತ್ ಸಿಂಗ್ ಹಾಡನ್ನು ಹಾಡಬೇಕು ಮತ್ತು ನೇಪಾಳಿ ಕಲಾವಿದ ಸುಶಾಂತ್ ಖತ್ರಿ ನೃತ್ಯವನ್ನು ಸಂಯೋಜಿಸಬೇಕು. ಸಂಗೀತ ವೀಡಿಯೊ ನನ್ನ ಆತ್ಮಕ್ಕೆ ಶಾಂತಿ ನೀಡುತ್ತದೆ ಎಂದು ಬಾಲಕ ಬರೆದಿದ್ದಾನೆ. ತನ್ನ ಕೊನೆಯ ಆಸೆಯನ್ನು ಪೂರ್ಣಗೊಳಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾನೆ" ಎಂದು ಪೊಲೀಸ ಅಧಿಕಾರಿ ತಿಳಿಸಿದ್ದಾರೆ.
PublicNext
12/10/2021 06:45 pm