ಕಲಬುರಗಿ : ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು ಪತಿಯೇ ಕೊಲೆ ಮಾಡಿ ಫ್ಯಾನಿಗೆ ನೇಣು ಹಾಕಿದ್ದಾರೆ ಎಂದು ಯುವತಿ ಪಾಲಕರು ಆರೋಪ ಮಾಡಿರುವ ಘಟನೆ ಕಲಬುರಗಿ ನಗರದ ಪ್ರಗತಿ ಕಾಲೋನಿಯಲ್ಲಿ ನಡೆದಿದೆ.
ಇನ್ನು ಕಳೆದ 7 ತಿಂಗಳ ಹಿಂದೆ ಲೋಕೇಶ್ ಎಂಬಾತನೊಂದಿಗೆ ಮದುವೆಯಾಗಿದ್ದ ಜ್ಯೋತಿ (22) ಸಾವನ್ನಪ್ಪಿದ ಯುವತಿ. ಕೆಕೆಆರ್ ಟಿಸಿಯ ಸೇಡಂ ಡಿಪೋ ದಲ್ಲಿ ಚಾಲಕ ನಾಗಿರೋ ಲೋಕೇಶ್ ಹೆಂಡತಿ ಜ್ಯೋತಿ ಜೊತೆ ಕಲಬುರಗಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕಳೆದ ರಾತ್ರಿ ಲೋಕೇಶ್ ಮತ್ತು ಅವರ ಕುಟುಂಬದವರು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನು ಹಣಕ್ಕಾಗಿ ಲೋಕೇಶ್ ಪ್ರತಿದಿನ ಜ್ಯೋತಿಗೆ ಹಿಂಸಿಸುತ್ತಿದ್ದ, ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, ಐದು ಲಕ್ಷ ವರದಕ್ಷಿಣೆ ನೀಡಿದ್ದ ಪೋಷಕರು ಪತಿ ಲೋಕೇಶ್ ಮತ್ತು ಅವರ ಕುಟುಂಬದ ವಿರುದ್ಧ ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
08/10/2021 09:58 am