ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸೆಪ್ಟಂಬರ್ 14ರ ರಾತ್ರಿ ಕಾರು ಗುದ್ದಿ ಇಬ್ಬರು ದ್ವಿಚಕ್ರವಾಹನ ಸವಾರರಾದ ಪ್ರೀತಮ್ ಮತ್ತು ಕೃತಿಕಾ ಫ್ಲೈಓವರ್‌ನಿಂದ ಬಿದ್ದು ಸಾವನ್ನಪ್ಪಿದ್ದರು. ಈ ಪ್ರಕರಣದ ಆರೋಪಿ ನಿತೇಶ್‌ಗೆ ಕಾಂಪೌಂಡಬಲ್ ಅಫೆನ್ಸ್ ನಡಿ ಬೇಲ್ ನೀಡಲಾಗಿದೆ. ಸ್ಟೇಷನ್ ಬೇಲ್ ಮೇಲೆ ಆತನನ್ನು ಪೊಲೀಸರು ಬಿಟ್ಟಿದ್ದಾರೆ.
ಪ್ರಕರಣದ ಸಂಬಂಧ ಹೇಳಿಕೆ ನೀಡಿರುವ ಆರೋಪಿ ನಿತೇಶ್, "ಫ್ಲೈಓವರ್ ಮೇಲೆ ಬಂದಾಗ ಏನಾಯ್ತೊ ನನಗೆ ಗೊತ್ತಿಲ್ಲ. ಸ್ಪೀಡ್‌ನಲ್ಲಿದ್ದೆ ಅನ್ನೋದಷ್ಟೆ ನನಗೆ ಗೊತ್ತು. ಆ ನಂತರದ ಬೆಳವಣಿಗೆಗಳು ನನಗೆ ಗೊತ್ತಿಲ್ಲ. ರಸ್ತೆ ಬಿಟ್ಟು ಯಾಕೆ ಪಕ್ಕಕ್ಕೆ ಹೋದೆ ಅನ್ನೋದು ನನಗೆ ಗೊತ್ತಿಲ್ಲ" ಬೇಜವಬ್ದಾರಿ ಸ್ಟೇಟ್ಮೆಂಟ್ ಕೊಟ್ಟಿದ್ದಾನೆ.
ಆರೋಪಿಯ ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆಗಿದೆ. ಅಷ್ಟೇ ಅಲ್ಲದೆ ಹಿಪ್ಸ್, ಎದೆಗೆ ಪೆಟ್ಟು ಬಿದ್ದಿದೆ. ಕಾಲುಗಳಿಗೆ ಪೆಟ್ಟು ಬಿದ್ದಿದೆ. ಇನ್ನು ಮಲಗಿದ್ದ ಜಾಗದಲ್ಲಿಯೇ ಮಲಗಿರುವುದರಿಂದ ಜಾಮೀನು ನೀಡಲಾಗಿದೆ ಎನ್ನಲಾಗಿದೆ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ನಿತೇಶ್ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾನೆ.
ಆಸ್ಪತ್ರೆಗೆ ಹೋಗಿ ಆರೋಪಿಯ ಹೇಳಿಕೆ ಪಡೆದುಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಘಟನೆಗೆ ಬ್ರೇಕ್ ಫೈಲ್ಯೂರ್ ಕಾರಣವೇ ಅಥವಾ ಅಜಾಗರುಕತೆ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದಾಗಿದೆ.
PublicNext
30/09/2021 03:29 pm