ಬೆಂಗಳೂರು: ಕಳ್ಳರು ಮನೆಯ ಮುಂದೆ ಬಿಟ್ಟಿರುವ ಚಪ್ಪಲಿ, ಶೂಗಳನ್ನು ಬಿಡುತ್ತಿಲ್ಲ. ಬೆಂಗಳೂರಿನಲ್ಲಿ ಚಪ್ಪಲಿ ಕಳ್ಳರ ಗ್ಯಾಂಗ್ ಮತ್ತೆ ಆಕ್ಟೀವ್ ಆಗಿದ್ದು, ಮನೆಯ ಮುಂದೆ, ಅಪಾರ್ಟ್‌ಮೆಂಟ್‌ನಲ್ಲಿ ಇರುವ ಬ್ರ್ಯಾಂಡೆಡ್ ಶೂ, ಚಪ್ಪಲಿಗಳನ್ನು ಕದಿಯುತ್ತಿದ್ದಾರೆ.
ಕಳ್ಳನೋರ್ವ ಬೆಂಗಳೂರಿನ ತಿಗಳರಪಾಳ್ಯದಲ್ಲಿ ಒಂದೇ ದಿನ 20ಕ್ಕೂ ಹೆಚ್ಚು ಮನೆಗಳಲ್ಲಿ ಶೂ ಕದ್ದಿದ್ದಾನೆ. ಕಳ್ಳನ ಕೃತ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ಲಭಿಸಿದ ಮಾಹಿತಿ ಪ್ರಕಾರ, ಸುಮಾರು 1.5 ಲಕ್ಷ ರೂ. ಮೌಲ್ಯದ 200ಕ್ಕೂ ಹೆಚ್ಚು ಜೊತೆ ಶೂ, ಚಪ್ಪಲಿ ಕಳ್ಳತನವಾಗಿದೆ.
ಈ ಸಂಬಂಧ ತಿಗಳರಪಾಳ್ಯದ ನಿವಾಸಿಗಳು ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.
PublicNext
29/09/2021 07:05 pm