ವಿಜಯನಗರ: ಕಲುಷಿತ ನೀರು ಕುಡಿದು ಓರ್ವ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿರುವ ದುರ್ಘಟನೆ ಜಿಲ್ಲೆಯ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ನಡೆದಿದೆ.
ಮಕರಬ್ಬಿ ಗ್ರಾಮದ ಬೆಳವಿಗಿ ನೀಲಪ್ಪ (63) ಮೃತ ದುರ್ದೈವಿ. ಕಲುಷಿತ ನೀರು ಕುಡಿದ ಪರಿಣಾಮ ನೀಲಪ್ಪ ಅವರಿಗೆ ವಾಂತಿ ಭೇದಿಯಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಮತ್ತೋರ್ವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಅಸ್ವಸ್ಥಗೊಂಡ 30ಕ್ಕೂ ಹೆಚ್ಚು ಜನರನ್ನು ಹಡಗಲಿ, ಹೊಸಪೇಟೆ ಸೇರಿದಂತೆ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅವಘಡಕ್ಕೆ ಗ್ರಾಮ ಪಂಚಾಯತಿ ನಿರ್ಲಕ್ಷ್ಯ ಕಾರಣ ಎನ್ನಲಾಗಿದೆ.
PublicNext
28/09/2021 04:17 pm