ಕನಕಪುರ: ವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ದುರಂತ ಅಂತ್ಯ ಕಂಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಲ್ಲಿ ಸಂಭವಿಸಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕು ಉರ್ಗ್ಯಂ ಗ್ರಾಮದ ಚಂದನ (20) ಮತ್ತು ಈಕೆಯ ಪ್ರಿಯಕರ ಸತೀಶ್ ಕುಮಾರ್ (24) ಮೃತರು.
ಒಲ್ಲದ ಮನಸ್ಸಿನಿಂದ ಗಣೇಶ್ ಎಂಬ ಯುವಕನೊಂದಿಗೆ ಮೃತ ಚಂದನಾಳ ಮದುವೆಯಾಗಿತ್ತು. ಆದರೆ ಒಂದೇ ಗ್ರಾಮದವರಾದ ಚಂದನ ಮತ್ತು ಸತೀಶ್ ಕುಮಾರ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೊನೆಗೆ ಗಂಡನನ್ನ ಬಿಟ್ಟು ಚಂದನ ತನ್ನ ಪ್ರಿಯಕರನೊಂದಿಗೆ ಸೆ.22ರಂದು ಊರು ಬಿಟ್ಟಿದ್ದಳು.
ಕನಕಪುರ ಕಬ್ಬಾಳು ಬೆಟ್ಟಕ್ಕೆ ಬಂದಿದ್ದ ಇವರು ಬೆಟ್ಟದ ಮೇಲಿಂದ ಹಾರಿ ಪ್ರಾಣಬಿಟ್ಟದ್ದಾರೆ. ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಕೊಳೆತ ಸ್ಥಿತಿಯಲ್ಲಿದ್ದ ಶವಗಳನ್ನ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಾತನೂರು ಪೊಲೀಸರು ಪರಿಶೀಲನೆ ನಡೆಸಿದರು. ಮೃತಳ ತಾಯಿ ನೀಡಿದ ದೂರಿನ ಮೇರೆಗೆ ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
27/09/2021 12:23 pm