ಡರಾಂಗ್(ಅಸ್ಸಾಮ್): ಇಲ್ಲಿನ ಧೋಳಪುರ್ ಎಂಬಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. ಘಟನೆಯಲ್ಲಿ ಓರ್ವನಿಗೆ ಗುಂಡು ತಗುಲಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಇದೆ.
ಕಳೆದ ಮೂರು ದಿನಗಳಿಂದ ಅಸ್ಸಾಮ್ ನ ಧೋಳ್ ಪುರ ಎಂಬಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದನ್ನ ವಿರೋಧಿಸಿದ ಸ್ಥಳೀಯರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಸ್ಥಳೀಯರು ಹಾಗೂ ಪೊಲೀಸರೊಂದಿಗೆ ಸಂಘರ್ಷವೇ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ಮಾಡಿದ್ದು ಈ ವೇಳೆ ಪೊಲೀಸರನ್ನು ಅಟ್ಟಾಡಿಸಿಕೊಂಡು ಬಂದ ಓರ್ವನಿಗೆ ಗುಂಡು ತಗುಲಿದ್ದು ದೃಶ್ಯದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ಪೊಲೀಸರೂ ಕೂಡ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದಕ್ಕೂ ಮುನ್ನ ಹಲ್ಲೆಗೊಳಗಾದ ವ್ಯಕ್ತಿ ದೊಣ್ಣೆ ಹಿಡಿದು ತನ್ನನ್ನು ಅಟ್ಟಾಡಿಸಿಕೊಂಡು ಬಂದನೆಂಬ ಕಾರಣಕ್ಕೆ ನಿತ್ರಾಣಗೊಂಡು ಬಿದ್ದ ವ್ಯಕ್ತಿಯ ಮೇಲೆ ಫೋಟೋಗ್ರಾಫರ್ ಒಬ್ಬ ಹಾರಿ ಜಿಗಿದು ಒದ್ದಿದ್ದಾನೆ. ಹಾಗೂ ಆತನ ಕುತ್ತಿಗೆ ಭಾಗದಲ್ಲಿ ಪಂಚ್ ಕೊಟ್ಟಿದ್ದಾನೆ.
ಈ ಎಲ್ಲ ಘಟನಾವಳಿಗಳ ಬಗ್ಗೆ ಆಕ್ರೋಶಿತರಾದ ಸ್ಥಳೀಯರು ಅಸ್ಸಾಮ್ ಡಿಜಿಪಿ ಸ್ಥಳಕ್ಕೆ ಬಂದು ವಾಸ್ತವತೆ ತಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.
PublicNext
23/09/2021 07:17 pm