ಬೆಂಗಳೂರು:ರಾಜ್ಯ ರಾಜಧಾನಿ ಅಷ್ಟೇ ಅಲ್ಲ ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ. ಆತ್ಮಹತ್ಯೆಗೆ ಶರಣಾದ ಶಂಕರ್ ಪುತ್ರ ನಮ್ಮಪ್ಪ ಕಾಮುಕ, ಕುಡುಕ ಎಂದು ಆತನಿಗೆ ಐವರು ಹೆಂಗಸರೊಂದಿಗೆ ಅಕ್ರಮ ಸಂಬಂಧ ಇತ್ತು. ಇದರಿಂದ ಅಮ್ಮ ಬೇಸತ್ತಿದ್ದಳು ಎಂದು ಡೆತ್ ನೋಡ್‌ನಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮಪ್ಪನಿಗೆ ಐವರು ಮಹಿಳೆಯರೊಂದಿಗೆ ಸಂಬಂಧ ಇತ್ತು. ಅಲ್ಲದೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯ ಮಗಳನ್ನು ಮದುವೆಯಾಗುವಂತೆ ನನ್ನನ್ನು ಪೀಡಿಸುತ್ತಿದ್ದನು. ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಿದ್ದನು ಎಂದೆಲ್ಲಾ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ನನ್ನ ಮೊದಲ ಸಹೋದರಿಗೆ ಆಕೆಯ ಅತ್ತೆ ಮತ್ತು ಮಾವ, ಗಂಡನಿಗೆ ಹೇಳಿ ಹೊಡೆಸ್ತಿದ್ದರು. ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಕ್ಕೆ ನಮ್ಮಪ್ಪನೇ ಕಾರಣ ಎಂದು ಮಗ ಮಧುಸಾಗರ್ ದೂರಿದ್ದಾರೆ. ನನ್ನ ಎರಡನೇ ಸಹೋದರಿಗೂ ನನ್ನ ತಂದೆ ತೊಂದರೆ ಕೊಟ್ಟಿದ್ದರು. ನನ್ನ ತಾಯಿಗೆ ಹಾನಿ ಉಂಟು ಮಾಡಲು ಯತ್ನಿಸಿದ್ದರು. ನಮ್ಮನಿಗೆ ನಮ್ಮಪ್ಪ ಚಪ್ಪಲಿಯಿಂದ ಹೊಡೆಯುತ್ತಿದ್ದರು. ನಮ್ಮಮ್ಮನ ಬಾಯಲ್ಲಿ ಚಪ್ಪಲಿ ಇಟ್ಟು ಅವಮಾನಿಸ್ತಿದ್ದರು. ನಮ್ಮಮ್ಮನಿಗೆ ಇನ್ನೊಂದು ಸಂಬಂಧ ಇದೆ ಎಂದು ಶಂಕಿಸಿದ್ದರು ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖ ಇದೆ.
PublicNext
20/09/2021 12:08 pm