ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈನಲ್ಲಿ ಮತ್ತೊಂದು ರೇಪ್: ಬಾಲಕಿ ಮೇಲೆ ಅಮಾನುಷ ಕೃತ್ಯ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಭೀಕರ ಘಟನೆಗಳು ಸಂಭವಿಸುತ್ತಲೇ ಇದೆ. 34ರ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕಬ್ಬಿಣದ ರಾಡ್ ತುರುಕಿದ ಪ್ರಕರಣದ ಬೆನ್ನಲ್ಲೇ ಇದೀಗ 14 ವಯಸ್ಸಿನ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಥಾಣೆ ಜಿಲ್ಲೆಯ ಉಲ್ಲಾಸನಗರ ರೈಲು ನಿಲ್ದಾಣದ ಸನಿಹದಲ್ಲಿ ಈ ಘಟನೆ ನಡೆದಿದೆ.

ಈ ಪ್ರಕರಣ ಸಂಬಂಧ ಆರೋಪಿ ಶ್ರೀಕಾಂತ್ ಗಾಯಕ್ವಾಡ್ ಅಲಿಯಾಸ್ ದಾದನನ್ನು(35 ವರ್ಷ) ಬಂಧಿಸಲಾಗಿದೆ. ಆದರೆ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ ಘಟನೆಯೂ ನಡೆದಿದೆ. ಬಾಲಕಿ ತನ್ನ ಪೋಷಕರೊಂದಿಗೆ ಹತ್ತಿರದ ಹಿಲ್ ಲೈನ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ ಘಟನೆ ನಡೆದಿರುವು ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ವಿಥಲವಾಡಿ ಠಾಣೆಯಲ್ಲಿ ದೂರು ನೀಡುವಂತೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

ಮೊದಲೇ ಆಘಾತದಿಂದ ಕುಸಿದಿದ್ದ ಬಾಲಕಿ ಕುಟುಂಬ ಮತ್ತಷ್ಟು ಹೈರಾಣಾಗಿದೆ. ಬಳಿಕ ವೆಲ್‌ಫೇರ್ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಅಧಿಕಾರಿಗಳ ಸಹಾಯದಿಂದ ದೂರು ದಾಖಲಿಸಲಾಗಿದೆ. ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಟಿವಿ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

Edited By : Nagaraj Tulugeri
PublicNext

PublicNext

13/09/2021 04:22 pm

Cinque Terre

47.65 K

Cinque Terre

0