ಕಾನ್ಪುರ (ಉತ್ತರ ಪ್ರದೇಶ): ಬುರ್ಖಾ ಧರಿಸಿದ ಆತ ನೇರವಾಗಿ ಆಸ್ಪತ್ರೆಯ ಮಹಿಳಾ ವಾರ್ಡ್ ಗೆ ನುಗ್ಗಿದ್ದಾನೆ. ಆತನ ಚಲನವಲನ ಕಂಡ ಅಲ್ಲಿನ ಮಹಿಳೆಯರಿಗೆ ಅನುಮಾನ ಬಂದಿದೆ. ಹೆಬ್ಬೆರಳು ಗಮನಿಸಿದಾಗ ಆತ ಪುರುಷ ಎಂಬುದು ಗೊತ್ತಾಗಿ ಮಹಿಳೆಯರೇ ಸೇರಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ. ಈ ಘಟನೆ ನಡೆದಿದೆ. ಸಲ್ವಾರ್ ಹಾಗೂ ಬುರ್ಖಾ ಧರಿಸಿದ್ದ ಈತ ಆಸ್ಪತ್ರೆಯ ಮಹಿಳಾ ವಾರ್ಡ್ ಗೆ ಹೋಗಿದ್ದಾನೆ. ಅನುಮಾನ ಬಂದ ಪರಿಶೀಲಿಸಿದಾಗ ಅದು ಮಹಿಳೆಯಲ್ಲ ಪುರುಷ ಎಂಬುದು ತಿಳಿದುಬಂದಿದೆ. ಅಚ್ಚರಿ ಎಂದರೆ ಈತ ಅದೇ ಆಸ್ಪತ್ರೆಯಲ್ಲಿನ ವೈದ್ಯರೊಬ್ಬರ ಚಾಲಕ ಎನ್ನಲಾಗಿದೆ.
ಆಸ್ಪತ್ರೆ ಸಿಬ್ಬಂದಿ ಈತನನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ನಂತರ ಈತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.
PublicNext
11/09/2021 11:43 am