ತಿರುವನಂತಪುರಂ(ಕೇರಳ): ನಾಯಿ ಮತ್ತು ಬೆಕ್ಕುಗಳನ್ನ ನಮ್ಮ ಮನೆಯಲ್ಲಿ ನಾವು ಪ್ರೀತಿ ದ್ಯೋತಕವಾಗಿ ಸಾಕುತ್ತೇವೆ. ಅದರಲ್ಲಿ ನಾಯಿ ಅಂದ್ರೆ ಅದು ಪ್ರಾಮಾಣಿಕತೆಗೆ ಮತ್ತೊಂದು ಹೆಸರು. ಅಂತಹ ಪ್ರಾಣಿಗೆ ಈ ತಾಟಕಿಯರು ಬೆಂಕಿ ಇಟ್ಟಿದ್ದಾರೆ.
ಈ ಘಟನೆ ನಡೆದಿದ್ದು ಕೇರಳದ ಎರ್ನಾಕುಲಂ ಜಿಲ್ಲೆಯ ಮಂಜಲಿ ಎಂಬ ಹಳ್ಳಿಯಲ್ಲಿ. ಗ್ರಾಮದ ಕೆಲ ಮಹಿಳೆಯರು ಸೇರಿ ನಾಯಿ ಹಾಗೂ ಅದರ ಒಂದು ತಿಂಗಳಿನ ಏಳು ಮರಿಗಳಿಗೆ ಬೆಂಕಿ ಇಟ್ಟಿದ್ದಾರೆ. ಪರಿಣಾಮ 2ಮರಿಗಳು ಬೆಂಕಿಗೆ ಬಲಿಯಾಗಿವೆ. ಉಳಿದ ಐದು ಮರಿಗಳು ಹಾಗೂ ನಾಯಿ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿವೆ. ಈ ದೃಶ್ಯ ಕಂಡ ಸ್ಥಳೀಯರು ಪ್ರಾಣಿ ಸಂರಕ್ಷಣಾ ತಂಡಕ್ಕೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ತಂಡದವರು ಉಳಿದ ನಾಯಿಗಳನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಜಾಮೀನು ರಹಿತ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
PublicNext
08/09/2021 04:05 pm