ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕೌಟುಂಬಿಕ ಕಲಹಕ್ಕೆ ವ್ಯಕ್ತಿಯನ್ನ ಥಳಿಸಿ ಬಿಲ್ಡಿಂಗ್ ಮೇಲಿಂದ ತಳ್ಳಲು ಯತ್ನ.!

ಬೆಳಗಾವಿ: ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯೊಬ್ಬರಿಗೆ ಇಬ್ಬರು ಥಳಿಸಿ ಬಿಲ್ಡಿಂಗ್ ಮೇಲಿಂದ ಕೆಳಗೆ ತಳ್ಳಲು ಯತ್ನಿಸಿದ ಅಮಾನವೀಯ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.

ನಗರದ ಹೃದಯ ಭಾಗವಾಗಿರುವ ಕಡೋಲ್ಕರ್ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯನ್ನು ಒಂದೇ ಕುಟುಂಬದವರು ಥಳಿಸಿದ್ದಲ್ಲದೇ ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ತಳ್ಳಲು ಯತ್ನಿಸಿದ್ದಾರೆ. ವ್ಯಕ್ತಿಯ ಚೀರಾಟ ನೋಡಿದ ಜನರು ಸ್ಥಳದಲ್ಲಿ ಜಮಾಯಿಸಿದರು. ಜನ ಸೇರುತ್ತಿದಂತೆ ಆತನನ್ನು ಕೆಳಗೆ ತಳ್ಳದೇ ಮೇಲಕ್ಕೆ ಎತ್ತಿಕೊಂಡಿದ್ದಾರೆ.

ವ್ಯಕ್ತಿಯನ್ನು ಕೆಳಗೆ ತಳ್ಳುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಇದೇ ವಿಡಿಯೋ ಈಗ ವೈರಲ್ ಆಗಿದೆ. ಬೆಳಗಾವಿ ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Shivu K
PublicNext

PublicNext

06/09/2021 08:59 am

Cinque Terre

578.8 K

Cinque Terre

4

ಸಂಬಂಧಿತ ಸುದ್ದಿ