ಬೆಂಗಳೂರು: ಕಳೆದ ಮೇ 10ರಂದು ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಯುವಕನಿಗೆ ಮೂತ್ರ ಕುಡಿಸಿದ್ದಾರೆ ಎನ್ನಲಾದ ಪಿಎಸ್ಐ ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ನಿನ್ನೆ ಬುಧವಾರ ರಾತ್ರಿ ಬಂಧಿಸಿದ್ದಾರೆ.
ಮಹಿಳೆಗೆ ಕರೆ ಮಾಡಿದ್ದ ಎಂಬ ವಿಚಾರಕ್ಕಾಗಿ ಅರ್ಜುನ್, ನನ್ನನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದರು. ಕುಡಿಯಲು ನೀರು ಕೇಳಿದಾಗ, ವ್ಯಕ್ತಿಯೊಬ್ಬರಿಂದ ನನ್ನ ಬಾಯಿಗೆ ಮೂತ್ರ ಹೊಯ್ಯಿಸಿದ್ದರು. ನೆಲದ ಮೇಲೆ ಬಿದ್ದಿದ್ದ ಮೂತ್ರವನ್ನೂ ನೆಕ್ಕಿಸಿದ್ದರು’ ಎಂದು ಮೂಡಿಗೆರೆ ತಾಲ್ಲೂಕಿನ ಕಿರಗುಂದದ ಯುವಕ ಕೆ.ಎಲ್. ಪುನೀತ್ ಪಿಎಸ್ಐ ಮೇಲೆ ಆರೋಪಿಸಿದ್ದರು. ಈ ಬಗ್ಗೆ , ಗೋಣಿಬೀಡು ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಪಿಎಸ್ಐ ಅರ್ಜುನ್ ಮೇಲೆ ಎಫ್‌ಐಆರ್ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ತನಿಖೆ ನಡೆಸಿದ್ದ ಎಸ್ಪಿ ರವಿ ಚನ್ನಣ್ಣವರ ನೇತೃತ್ರದ ತಂಡ ಆರೋಪಿ ಪಿಎಸ್ಐ ಅರ್ಜುನ್‌ನನ್ನು ಬಂಧಿಸಿದೆ.
PublicNext
02/09/2021 08:36 am