ಚಿಕ್ಕೋಡಿ : ರಾತ್ರೋ ರಾತ್ರಿ ಊರಲ್ಲಿ ನಿಲ್ಲಿಸಿದ್ದ ವಾಹನಗಳ ಪೆಟ್ರೋಲ್ ಕದಿಯುತ್ತಿದ್ದ ಖದೀಮನ ಕೃತ್ಯವನ್ನು ನೋಡಿದ್ದ ವ್ಯಕ್ತಿಯನ್ನು ಕೊಂದು ಶವವನ್ನು ತಿಪ್ಪೆಯಲ್ಲಿ ಮುಚ್ಚಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದಿದೆ.
ಪ್ರವೀಣ ಸುಣಧೋಳಿ ಎಂಬ 20 ವರ್ಷದ ಯುವಕ 28 ವರ್ಷದ ಮಹಾದೇವ ಕಿಚಡಿ ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ. ತಾನು ಪೆಟ್ರೋಲ್ ಕಳ್ಳತನ ಮಾಡಿರುವ ಸುದ್ದಿಯನ್ನು ಊರಿನ ಜನರ ಮುಂದೆ ಹೇಳಿ ನನ್ನ ಮೆರ್ಯಾದೆ ತೆಗೆಯುತ್ತಾನೆ ಎಂದು ರಾಡ್ ನಿಂದ ಹೊಡೆದು ಕೊಲೆ ಮಾಡಿ ಶವವನ್ನು ತಿಪ್ಪೆಯಲ್ಲಿ ಹೂತಿದ್ದೆ ಎಂದು ಪ್ರವೀಣ ಪೊಲೀಸರ ಮುಂದೆ ಹೇಳಿದ್ದಾನೆ.
ನಾಲ್ಕು ದಿನದ ಬಳಿಕ ಶವ ವಾಸನೆ ಹೊಡೆದು ಕೊಲೆ ಸುದ್ದಿ ವೈರಲ್ ಆಗುತ್ತಿದ್ದಂತೆ ಕೊಲೆ ಮಾಡಿದ ಆರೋಪಿ ಪ್ರವೀಣನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
30/08/2021 03:56 pm