ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಬಿಯರ್ ಬಾಟಲ್‌ಗಳು, ಬಸ್ ಟಿಕೆಟ್ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಘಟನೆ ನಡೆಯುವ ಮೂರು ದಿನಗಳ ಮುಂಚೆ ಮತ್ತು ಒಂದು ದಿನದ ಹಿಂದೆ ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಘಟನಾ ಸ್ಥಳಕ್ಕೆ ಬಂದಿರುವುದನ್ನು ಕಾಮುಕರು ಫಾಲೋ ಮಾಡಿದ್ದರು. ಘಟನೆ ನಡೆದ ದಿನದಿಂದ ಕಾಮುಕರು ಎಸ್ಕೇಪ್ ಆಗಿದ್ದರಿಂದಾಗಿ ಪೊಲೀಸರು ತನಿಖೆ ಮುಂದುವರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆಯಲ್ಲಿ ಆರೋಪಿಗಳು, ದುಷ್ಕೃತ್ಯದ ವೇಳೆ ಇದ್ದಿದ್ದು ಆರು ಜನರಲ್ಲ, ಇನ್ನೋರ್ವ ಕೂಡಾ ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ. ಹೀಗಾಗಿ ಅತ್ಯಾಚಾರದಲ್ಲಿ 6 ಜನ ಭಾಗಿಯಾಗಿದ್ದು, 5 ಜನರನ್ನು ಪತ್ತೆ ಹಚ್ಚಿದ್ದೇವೆ ಓರ್ವ ತಲೆಮರಿಸಿಕೊಂಡಿದ್ದಾನೆ ಎಂದಿದ್ದ ಪೊಲೀಸರಿಗೆ ಇನ್ನೂ ಒಬ್ಬ ತಪ್ಪಿಸಿಕೊಂಡಿರುವುದು ಗೊತ್ತಾಗಿದೆ. ಒಟ್ಟು 7 ಜನ ದುಷ್ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಇದರಲ್ಲಿ ಕೆಲವರು ಈ ಮೊದಲೆ ಸಾಕಷ್ಟು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆಂದು ಪೊಲೀಸರ ಪ್ರಾಧಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ನ್ಯಾಯಾಲಯ ಆರೋಪಿಗಳನ್ನು 10 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳಿಗೆ ತೀವ್ರ ವಿಚಾರಣೆ ನಡೆಯಲಿದ್ದು, ಪೊಲೀಸರು ಕಾಮುಕರಿಂದ ಮತ್ತಷ್ಟು ಮಾಹಿತಿ ಕಲೆ ಹಾಕುವ ವಿಶ್ವಾಸದಲ್ಲಿದ್ದಾರೆ.
PublicNext
29/08/2021 03:24 pm