ಭೋಪಾಲ್: ಕಳ್ಳನೆಂಬ ಶಂಕೆಯ ಮೇರೆಗೆ ಬುಡಕಟ್ಟು ಜನಾಂಗದ 45 ವರ್ಷದ ವ್ಯಕ್ತಿಯೊಬ್ಬನನ್ನು ಮನಬಂದಂತೆ ಥಳಿಸಿ, ಟ್ರಕ್‌ಗೆ ಕಟ್ಟಿ ಎಳೆದೊಯ್ದು ಹತ್ಯೆಗೈದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ವ್ಯಕ್ತಿಯನ್ನು ಬನದಾ ಹಳ್ಳಿಯ ಕನ್ಹಾ, ಅಲಿಯಾಸ್ ಕನ್ಹಿಯಾ ಭೀಲ್ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ನೀಮುಚ್‌ನ ಜೆತಿಯಾ ಗ್ರಾಮದಲ್ಲಿ ಗುರುವಾರ ನಡೆದ ಈ ದುರಂತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನ್ಹಾ ತನ್ನನ್ನು ಹೋಗಲು ಬಿಡುವಂತೆ ಎಷ್ಟೇ ಕೇಳಿಕೊಂಡರೂ ದುಷ್ಕರ್ಮಿಗಳ ಗುಂಪು ಥಳಿಸಿದೆ. ಅಷ್ಟೇ ಅಲ್ಲದೆ ಕೊಲೆ ಮಾಡಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಎಂಟು ಜನ ಆರೋಪಿಗಳನ್ನು ಗುರುತಿಸಿದ್ದಾರೆ. ಅವರಲ್ಲಿ ಐವರನ್ನು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರವೇ ಬಂಧಿಸಲಾಗುವುದು. ವೈರಲ್ ವಿಡಿಯೋ ಆರೋಪಿಗಳನ್ನು ಗುರುತಿಸಲು ಸಹಾಯ ಮಾಡಿತು" ಎಂದು ನೀಮುಚ್ ಪೊಲೀಸ್ ವರಿಷ್ಠಾಧಿಕಾರಿ ಸೂರಜ್ ವರ್ಮಾ ಹೇಳಿದ್ದಾರೆ.
PublicNext
29/08/2021 03:19 pm