ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

70 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಡಿಎಲ್‌ಆರ್‌, ಡಿಡಿಎಲ್‌ಆರ್ ಎಸಿಬಿ ಬಲೆಗೆ

ಬೆಂಗಳೂರು: ಲ್ಯಾಂಡ್ ರೆಕಾರ್ಡ್ ಮಾಡಿಕೊಡಲು 70 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಡಿಎಲ್‍ಆರ್, ಡಿಡಿಎಲ್‍ಆರ್ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದಾರೆ. ಜೊತೆಗೆ ಎಡಿಎಲ್‍ಆರ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಎಡಿಎಲ್‍ಆರ್ ಅಧಿಕಾರಿ ಆನಂದ್ ಮತ್ತು ರಮೇಶ್ ಬಂಧಿತರು. ಈ ವೇಳೆ ಡಿಡಿಎಲ್‌ಆರ್ ಕುಸುಮಲತಾ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಭೂ ಪರಿವರ್ತನೆ ದಾಖಲಾತಿ ಲಭ್ಯವಾಗಿದೆ ಎನ್ನಲಾಗಿದೆ.

ಡಿಡಿಎಲ್‌ಆರ್ ಕುಸುಮಲತಾ ಜಮೀನು ಮಾಲೀಕರಾದ ವೇಣುಗೋಪಾಲ್ ಮತ್ತು ಮಧ್ಯವರ್ತಿ ಶಾಂತಕುಮಾರ್ ಜೊತೆ ಶಾಮೀಲಾಗಿ ಅಕ್ರಮವಾಗಿ ಭೂ ಪರಿವರ್ತನೆ ಮಾಡಿರುವುದು ಬೆಳಕಿಗೆಬಂದಿದೆ.

ಬೆಂಗಳೂರಿನ ಜಾಲಹಳ್ಳಿ, ತುಮಕೂರು ಸೇರಿದಂತೆ ಒಟ್ಟು ಮೂರು ಕಡೆ ಎಸಿಬಿ ಅಧಿಕಾರಿಗಳು ನಿನ್ನೆ ತಡರಾತ್ರಿ ದಾಳಿ ಮಾಡಿದ್ದಾರೆ. ಆರೋಪಿ ಆನಂದ್ ಯಲಹಂಕ ತಾಲೂಕಿನ ಕುದುರುಗೆರೆಯಲ್ಲಿರುವ ಸರ್ವೆ ನಂಬರ್, 145,146ನ ಲ್ಯಾಂಡ್ ರೆಕಾರ್ಡ್ ಮಾಡಿಕೊಡಲು 70 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 25 ಲಕ್ಷ ಹಣ ಪಡೆದಿದ್ದರು. ಈ ಸಂಬಂಧ ಎಸಿಬಿ ಅಧಿಕಾರಿಗಳಿಗೆ ದೂರು ಕೊಡಲಾಗಿತ್ತು.

ದೂರಿನ ಆಧಾರದ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ದಾಳಿಯ ವೇಳೆ ಮನೆಯಲ್ಲಿದ್ದ 25 ಲಕ್ಷ ನಗದು 70 ಲಕ್ಷ ಮೊತ್ತದ ಮೂರು ಚೆಕ್ ಹಾಗೂ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ. ಡಿಡಿಎಲ್‍ಆರ್ ಕುಸುಮ ಲತಾ ಎಂಬವರ ಮನೆ ಮತ್ತು ಸರ್ವೆ ಅಧಿಕಾರಿ ಶ್ರೀನಿವಾಸ್‌ರ ತುಮಕೂರಿನ ಮನೆಗಳ ಮೇಲು ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳಿಗೆ ಕೆಲವು ದಾಖಲೆ ಪತ್ರಗಳು ಸಿಕ್ಕಿದ್ದು ಜಪ್ತಿ ಮಾಡಲಾಗಿದೆ. ದಾಳಿ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Edited By : Vijay Kumar
PublicNext

PublicNext

26/08/2021 02:25 pm

Cinque Terre

39.42 K

Cinque Terre

0