ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಮೇಕೆಗಳ ಮೇಲೆ ಬೀದಿನಾಯಿಗಳ ದಾಳಿ ;6 ಕುರಿ 14 ಮೇಕೆ ಸಾವು

ಅಥಣಿ: ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಬೀದಿನಾಯಿಗಳ ದಾಳಿಗೆ ಮೇಕೆ ,ಕುರಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ರೈತ ರಾಹು ಕಾರೆ ಎಂಬುವವರ 6 ಕುರಿ 14 ಮೇಕೆಗಳ ಮೇಲೆ ತಡರಾತ್ರಿ ಬೀದಿನಾಯಿಗಳ ದಂಡು ದಾಳಿ ಮಾಡಿ ದೇಹದ ತುಂಬೆಲ್ಲ ಕಚ್ಚಿ ಸಾಯಿಸಿದೆ

ತೋಟದಲ್ಲಿಯ ನಾಯಿಗಳು ಪ್ರವಾಹದ ಹಿನ್ನೆಲೆ ಹುಲಗಬಾಳಿ ಗ್ರಾಮ ಪ್ರವೇಶ ಮಾಡಿದ್ದವು, ಯಾರು ಊಹಿಸಿರಲಾದಂತೆ ಈ ಘಟನೆ ನಡೆದಿದ್ದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಇನ್ನೂ ಮೇಕೆಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದು,ಮೇಕೆಗಳ ಸಾವಿನಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ ಹಾಗೂ ಪರಿಹಾರಕ್ಕಾಗಿ ಸರ್ಕಾರಕ್ಕೆ ರೈತ ಆಗ್ರಹಿಸುತ್ತಿದ್ದಾನೆ.

Edited By : Shivu K
PublicNext

PublicNext

24/08/2021 12:42 pm

Cinque Terre

76.93 K

Cinque Terre

1