ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟ ಶ್ರೀಮುರಳಿ ಜೂನಿಯರ್​ ಆರ್ಟಿಸ್ಟ್​​ ಕಾಲು ಮುಟ್ಟಿ ಸಾರಿ ಕೇಳಿದ್ಯಾಕೆ.?

ಬೆಂಗಳೂರು: ಸ್ಯಾಂಡಲ್​ವುಡ್​ನ ರೋರಿಂಗ್​ ಸ್ಟಾರ್ ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರೀಕರಣದ ವೇಳೆಯಲ್ಲೇ 'ಮದಗಜ' ಒಂದಿಲ್ಲೊಂದು ಸುದ್ದಿ ಮಾಡುತ್ತಿದೆ.

ಮದಗಜ ಶೂಟಿಂಗ್​ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟಾಗಿ ಶೂಟಿಂಗ್​ ಅರ್ಧಕ್ಕೆ ನಿಂತಿತ್ತು. ಆದರೆ ಈಗ ಮತ್ತೆ ಚಿತ್ರೀಕರಣ ಆರಂಭವಾಗಿದ್ದು, ಫೈಟ್ ದೃಶ್ಯದ ಶೂಟಿಂಗ್​ ವೇಳೆ ಜೂನಿಯರ್​ ಆರ್ಟಿಸ್ಟ್​ ಕಾಲಿಗೆ ಪೆಟ್ಟಾಗಿದ್ದು, ಈ ವೇಳೆ ಆರ್ಟಿಸ್ಟ್​​ ಬಳಿ ತೆರಳಿದ ಶ್ರೀಮುರಳಿ ಕ್ಷಮೆ ಕೇಳಿದ್ದಾರೆ.

ಹೌದು. ಮದಗಜ ಶೂಟಿಂಗ್ ವೇಳೆ ಫೈಟ್​ ಮಾಡುತ್ತಿದ್ದ ಪುಟ್ಟರಾಜು ಎನ್ನುವ ಜೂನಿಯರ್​ ಆರ್ಟಿಸ್ಟ್ ಕಾಲಿಗೆ ಪೆಟ್ಟಾಗಿತ್ತು. ಮುರಳಿ ಅವರ ಬಳಿ ಬಂದು ಕೈ ಮುಗಿದು ಕ್ಷಮೆಯನ್ನು ಕೇಳಿ ಅವರ ಕಾಲನ್ನು ಮುಟ್ಟಿ, ಯೋಗ ಕ್ಷೇಮ ವಿಚಾರಿಸಿದ್ದಾರೆ. ಸದ್ಯ ಜೂನಿಯರ್​ ಆರ್ಟಿಸ್ಟ್​ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

Edited By : Vijay Kumar
PublicNext

PublicNext

23/08/2021 11:29 am

Cinque Terre

86.11 K

Cinque Terre

6

ಸಂಬಂಧಿತ ಸುದ್ದಿ