ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ಇಂದು ಯಾದಗಿರಿಗೆ ಕೇಂದ್ರ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಭಗವಂತ ಖುಭಾ ಅವರು, ಜನಾಶೀರ್ವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ
ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರ ಬೆಂಬಲಿಗರು ನಾಡಬಂದೂಕು ಸಿಡಿಸಿ ಸ್ವಾಗತಿಸಿದ್ದರು. ಈ ವೇಳೆ ಶಾಸಕರಾದ ರಾಜುಗೌಡ ಹಾಗೂ ವೆಂಕಟರೆಡ್ಡಿ ಮುದ್ನಾಳ ಇದ್ದರು.
ಎಸ್ಬಿಎಂಎಲ್ ಬಂದೂಕಿನಲ್ಲಿ ಮದ್ದು ತುಂಬಿ ಗಾಳಿಯಲ್ಲಿ ಹಾರಿಸಿದ ಪ್ರಕರಣಕ್ಕೆ ಸಂಭಂದಪಟ್ಟಂತೆ ಯರಗೋಳ ಗ್ರಾಮದ ಆರೋಪಿಗಳಾದ ಮೊನಪ್ಪ,ಶರಣಪ್ಪ,ನಿಂಗಪ್ಪ ಹಾಗೂ ದೇವಿಂದ್ರಪ್ಪ ಅವರನ್ನು
ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ
ಗ್ರಾಮೀಣ ಠಾಣೆ ಪಿಎಸ್ ಐ ಸುರೇಶ ಕುಮಾರ ಅವರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸ್ ಬಿಎಂಎಲ್ ಬಂದೂಕಿನಿಂದ ಗಾಳಿಯಲ್ಲಿ ಮದ್ದು ಹಾರಿಸಿದ ನಾಲ್ಕು ಜನರ ಮೇಲೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
18/08/2021 07:52 pm