ವರದಿ: ಮೌನೇಶ ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ಅತೀ ಹೆಚ್ಚು ಜನಸಂದಣಿ ಇರೋ ಸ್ಥಳದಲ್ಲಿ ಸಣ್ಣ ಮಕ್ಕಳನ್ನ ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡ್ತಿಸಿದ್ದ ಆರೋಪಿಗಳಿಬ್ಬರನ್ನು ಯಾದಗಿರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನದ ಹಾವಳಿ ಜೋರಾಗಿದ್ದು,
ಮಾರುತಿ ಕಾರಿನಲ್ಲಿ ಓಡಾಡಿಕೊಂಡು ಮಕ್ಕಳತ್ತಿರ ಮೊಬೈಲ್ ಕಳವು ಮಾಡಿಸಿ ಅವರಿಗೆ ಐದುನೂರು, ಸಾವಿರ ರೂಪಾಯಿ ಕೊಟ್ಟು ಕದ್ದ ಮೊಬೈಲ್ ಗಳನ್ನ ಕಾರಿನ ಡೋರ್ ಒಳಗಡೆ ಕಾಣದಂತೆ ಫ್ಯಾಕ್ ಮಾಡ್ತಿದ್ದರು.ಅಲ್ಲದೇ ಹೈದರಾಬಾದ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೊಬೈಲ್ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು.
ನಿನ್ನೆ ಮಧ್ಯಾಹ್ನದ ವೇಳೆ ಸಂಶಾಸ್ಪದವಾಗಿ ಮಾರುತಿ ಕಾರಿನಲ್ಲಿ ತಿರುಗಾಡುತ್ತಿದ್ದ ತೆಲಂಗಾಣ ಮೂಲದ ಆನಂದ ಹಾಗೂ ಮೈಸೂರಿನ ಅಶ್ವಿನಿ ಈ ಇಬ್ಬರನ್ನು ಯಾದಗಿರಿ ನಗರ ಠಾಣೆ ಪಿಎಸ್ಐ ವೀರಣ್ಣ ಹಾಗೂ ಸಿಬ್ಬಂದಿ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ಇಬ್ಬರ ಮೇಲೆ ಯಾದಗಿರಿ ನಗರ ಠಾಣೆಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡು 2 ಲಕ್ಷ ರೂಪಾಯಿಗೆ ಬೆಲೆ ಬಾಳುವ 40 ಮೊಬೈಲ್ ಫೋನ್ ಗಳು ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ.
PublicNext
17/08/2021 04:34 pm