ಚಂಡೀಗಢ: ಪ್ರೀತಿಗೆ ನಿಜಕ್ಕೂ ಕಣ್ಣು ಇಲ್ಲ, ವಯಸ್ಸಿನ ಅಂತರವಿಲ್ಲ ಎಂಬುದು ಪಂಜಾಬ್-ಹರ್ಯಾಣ ಗಡಿ ಭಾಗದ ಹಂಚ್‍ಪುರಿಯ ಹಠ್ನಿಯಲ್ಲಿ ಜೋಡಿಯೊಂದು ಸಾಭೀತು ಮಾಡಿದೆ.
ಹೌದು. 19 ವರ್ಷದ ಯುವತಿಗೆ 67 ವರ್ಷದ ವೃದ್ಧ ಮೇಲೆ ಪ್ರೀತಿಯಾಗಿರುವುದು ಎಲ್ಲಡೆ ಸುದ್ದಿಯಾಗುತ್ತಿದೆ. ಮನೆಗೆ ಬರುತ್ತಿದ್ದ ಮುದುಕನನ್ನು ಪರಿಚಯ ಮಾಡಿಕೊಂಡ ಯುವತಿ ಅಜ್ಜನ ಪ್ರೀತಿಯ ಬಲೆಯಲ್ಲಿ ಬಿದ್ದು ಆತನನ್ನು ಮದುವೆಯಾಗಿದ್ದಾಳೆ. ವಿಚಿತ್ರವೆಂದರೆ ಯುವತಿಗೆ ಈಗಾಗಲೇ ಮದುವೆಯಾಗಿದ್ದರೆ, ಇತ್ತ ಅಜ್ಜನಿಗೆ ಏಳು ಮಕ್ಕಳಿದ್ದು, ಮೊಮ್ಮಕ್ಕಳು ಕೂಡ ಇದ್ದಾರೆ.
ಪ್ರೇಮಪಾಶದಲ್ಲಿ ಮುಳುಗಿದ್ದ ಯುವತಿ ಪತಿಯನ್ನು ಬಿಟ್ಟು ಓಡಿ ಹೋಗಿ ಅಜ್ಜನನ್ನು ಮದುವೆಯಾಗಿದ್ದಾಳೆ. ಇದರ ಬೆನ್ನಲ್ಲೇ ಎರಡು ಕುಟುಂಬದಿಂದ ಬೆದರಿಕೆಗಳು ಬರಲಾರಂಭಿಸಿದೆ. ಅಷ್ಟೇ ಅಲ್ಲದೆ ಯುವತಿ ಕುಟುಂಬಸ್ಥರು ಅಜ್ಜನ ಮೇಲೆ ಕೇಸ್ ದಾಖಲಿಸಿದ್ದಾರೆ. ಇದರಿಂದಾಗಿ ರಕ್ಷಣೆ ಕೋರಿ ಅಜ್ಜ ಕೋರ್ಟ್ ಮೊರೆ ಹೋಗಿದ್ದು, ಈ ಅರ್ಜಿಯನ್ನು ಗಮನಿಸಿದ ಜಡ್ಜ್ ದಂಗಾಗಿದ್ದಾರೆ. ಅಷ್ಟೇ ಅಲ್ಲದೆ ಮದುವೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತಷ್ಟು ತನಿಖೆ ನಡೆಸುವಂತೆ ನ್ಯಾಯಮೂರ್ತಿ ಪೊಲೀಸರಿಗೆ ನಿರ್ದೇಶಿಸಿದ್ದಾರೆ.
PublicNext
15/08/2021 12:03 pm