ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು, ಯುವತಿಯರ ಮೇಲೆ ಹಲ್ಲೆ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಇಂತಹದ್ದೇ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದೆ.
ಹೌದು. ಬುಧವಾರ ಮಧ್ಯಾಹ್ನ ಹೈದರಾಬಾದ್‌ನ ಬೋವೆನ್‌ಪಲ್ಲಿಯ ಯುವತಿ ಪ್ರೀತಿಯ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಯುವಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಹೇಳಲಾಗಿದೆ.
ಪೊಲೀಸರ ಪ್ರಕಾರ, ಸೂಪರ್ ಮಾರ್ಕೆಟ್‌ನಲ್ಲಿ ವ್ಯಾಪಾರಿಯಾಗಿದ್ದ ಗಿರೀಶ್ (24) ಯುವತಿ ಚಮಂತಿ (22) ಜೊತೆ ಸ್ನೇಹ ಬೆಳೆಸಿದ್ದ. ಇಬ್ಬರೂ ಫೋನಿನಲ್ಲಿ ಮಾತನಾಡುತ್ತಿದ್ದರು. ಹೀಗಾಗಿ ಬುಧವಾರ ಚಮಂತಿ ಮನೆಗೆ ಬಂದ ಗಿರೀಶ್ ಪ್ರೀತಿಯ ಪ್ರಸ್ತಾಪ ಮಾಡಿದ್ದಾನೆ. ಆದರೆ ಚಮಂತಿ ಇದನ್ನು ತಿರಸ್ಕರಿಸಿದ್ದಕ್ಕೆ ಕೋಪಗೊಂಡು ಗಿರೀಶ್ ಆಕೆಗೆ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ.
ಈ ಸಂಬಂಧ ಆರೋಪಿ ಗಿರೀಶ್ ವಿರುದ್ಧ ಬೋವೆನ್‌ಪಲ್ಲಿ ಪೊಲೀಸರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.
PublicNext
05/08/2021 12:56 pm