ದಾವಣಗೆರೆ: ಕೊರೊನಾ ಲಸಿಕೆಗಾಗಿ ಮಹಿಳೆಯ ಕಾರ್ಪೊರೇಟರ್ ಪತಿ ಗಲಾಟೆ ಮಾಡಿದ ಘಟನೆ ನಡೆದಿದೆ
ತಮ್ಮ ವಾರ್ಡ್ ನ ಜನರಿಗೆ ಮಾತ್ರ ವ್ಯಾಕ್ಸಿನ್ ಟೋಕನ್ ನೀಡುವ ಮೂಲಕ ಪಾಲಿಕೆ ಸದಸ್ಯೆ ಸವಿತಾ ಪತಿ ಗಣೇಶ್ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ದಾವಣಗೆರೆಯ ನಿಟುವಳ್ಳಿ ನಗರದ ವಾರ್ಡ್ ನಂಬರ್ 32 ರಲ್ಲಿ ಗಲಾಟೆ ನಡೆದಿದ್ದು, ತಮ್ಮ ಏರಿಯಾದ ಜನರಿಗೆ ಮಾತ್ರ ಟೋಕನ್ ಹಂಚಿಕೆ ಮಾಡಿದ್ದಕ್ಕೆ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ಇದು ನಮ್ಮ ವಾರ್ಡ್ ನ ಜನರಿಗೆ ಮಾತ್ರ ನೀಡುವ ವ್ಯಾಕ್ಸಿನ್. ಬೇರೆ ಏರಿಯಾದ ಜನರಿಗೆ ವ್ಯಾಕ್ಸಿನ್ ನೀಡಲ್ಲ ಎಂದು ಗಲಾಟೆ ಮಾಡಿದ ಪಾಲಿಕೆ ಸದಸ್ಯೆಯ ಪತಿಯ ನಡೆಗೆ ಆಕ್ರೋಶ ವ್ಯಕ್ತವಾಯಿತು. 150 ವ್ಯಾಕ್ಸಿನ್ ಟೋಕನ್ ಅನ್ನು ಖುದ್ದು ಅವರ ಏರಿಯಾದ ಜನರಿಗೆ ಹಂಚಿದ ಕಾಂಗ್ರೆಸ್ ಪಾಲಿಕೆ ಸದ್ಯಸ್ಯೆಯ ಪತಿ ಗಣೇಶ್ ಕಾರ್ಯಕ್ಕೆ ಜನರು ಬೇಸರ ವ್ಯಕ್ತಪಡಿಸಿದರು.
PublicNext
03/08/2021 05:44 pm