ನಿಟ್ಟೆ:ಸ್ನೇಹಿತರೊಂದಿಗೆ ಪರಪ್ಪಾಡಿಯ ಅರ್ಭಿ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಯುವತಿಯೋರ್ವಳು ಮೃತಪಟ್ಟ ಘಟನೆ ಇಂದು ನಡೆದಿದೆ.ಮಂಗಳೂರು ಮೂಲದ ಕಾರ್ಕಳದ ಸ್ಥಳೀಯ ಕಾಲೇಜಿನ ವಿದ್ಯಾರ್ಥಿನಿ ವರ್ಷಿತಾ(19) ಮೃತಪಟ್ಟವರು.
ಈಜು ತಿಳಿದಿದ್ದ ವರ್ಷಿತಾ ಆಟವಾಡಲು ನೀರಿಗೆ ಇಳಿದಿದ್ದಾರೆ.ಆದರೆ ನೀರಿನ ಸುಳಿಗೆ ಸಿಲುಕಿ ಈಜಲಾರದೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಕಾರ್ಕಳ ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಶವವನ್ನು ಮೇಲಕ್ಕೆತ್ತಿದ್ದು,ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/08/2021 09:55 pm