ಚಿಕ್ಕಮಗಳೂರು: ಕೆಲವು ಸಂದರ್ಭಗಳಲ್ಲಿ ಅಚಾನಕ್ಕಾಗಿ ನಡೆಯುವ ಘಟನೆಗಳು ಪವಾಡದಂತ್ತಾಗಿಬಿಡುತ್ತವೆ ಸದ್ಯ ಇಲ್ಲೊಂದು ಘಟನೆಯಲ್ಲಿ ಅಗ್ನಿಶಾಮಕ ವಾಹನ ಆಪದ್ಭಾಂದವನಾಗಿ ಭಾರಿ ಅನಾಹುತವೊಂದನ್ನು ತಪ್ಪಿಸಿದೆ. ಹೌದು ನಗರದ ಎಐಟಿ ಸರ್ಕಲ್ ಸಮೀಪದಲ್ಲಿರುವ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡರ ಮನೆಗೆ ಸಿನಿಮಾ ಸ್ಟೈಲ್ ನಲ್ಲಿ ಚಾಕು-ಚೂರಿ ಹಿಡಿದು ನುಗ್ಗಿದ್ದ ಮುಸುಕುಧಾರಿಗಳಿಬ್ಬರು ಮಹಿಳೆಯನ್ನ ಕಟ್ಟಿಹಾಕಿ ದರೋಡೆಗೆ ಯತ್ನಿಸಿದ ವೇಳೆ ಆ ಮಹಿಳೆಯ ಮಗ ಮನೆಗೆ ಬರುತ್ತಿದ್ದಂತೆ ಕೈಯಲ್ಲೇ ಚೂರಿ ಹಿಡಿದುಕೊಂಡು ಕಳ್ಳರಿಬ್ಬರೂ ಹೊರ ಬಂದು ಬೈಕ್ ಹತ್ತಿ ಎಸ್ಕೇಪ್ ಆಗುತ್ತಿದ್ದರು.
ಇನ್ನೇನು ಕಳ್ಳರು ಬೈಕ್ ಏರಿ ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಆಪದ್ಭಾಂದವನಂತೆ ಬಂದ ಅಗ್ನಿಶಾಮಕ ವಾಹನದಿಂದ, ಸಿನಿಮಾ ಸ್ಟೈಲ್ ನಲ್ಲಿ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಕಿ ನಂದಿಸಲು ಹೊರಟ್ಟಿದ್ದ ವಾಹನ ರಸ್ತೆಬದಿ ಚಾಕು ಹಿಡಿದು ನಿಂತಿದ್ದ ಕಳ್ಳರನ್ನ ಕಂಡ ವಾಹನದ ಚಾಲಕ, ಕಳ್ಳರಿದ್ದ ಬೈಕ್ ಅನ್ನು ಅಡ್ಡಗಟ್ಟಿ ಡಿಕ್ಕಿ ಹೊಡೆದಿದ್ದಾರೆ. ಅಷ್ಟರಲ್ಲಿ ಎಸ್ಕೇಪ್ ಆಗುವ ಕಳ್ಳರ ಪ್ಲಾನ್ ಉಲ್ಟಾ ಆಗಿದೆ. ಸುತ್ತಲೂ ಜಮಾಯಿಸಿದ ಸ್ಥಳೀಯರು ಕಳ್ಳರತ್ತ ಕಲ್ಲುಗಳನ್ನ ತೂರುತ್ತ ಪೊಲೀಸರ ನೆರವಿನಿಂದ ಕಳ್ಳರು ಅಂದರ್ ಆಗಿದ್ದಾರೆ.
PublicNext
28/02/2021 11:41 am