ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿವಾಹಿತೆ ಮೇಲೆ ಅತ್ಯಾಚಾರ: ಮಹಿಳೆಯನ್ನು ಜೈಪುರದಿಂದ ದೆಹಲಿಗೆ ಕರೆದೊಯ್ದಿದ್ದ ಕಾಮುಕರು

ಜೈಪುರ: ವಿವಾಹಿತ ಮಹಿಳೆಯಳನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಜೈಪುರದಲ್ಲಿ ನಡೆದಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಪುರದಿಂದ ದೆಹಲಿಗೆ ಕರೆದೊಯ್ದು ಆಕೆಯ ಮೇಲೆ ದುಷ್ಕೃತ್ಯ ನಡೆದಿದ್ದು, ಕೃಷಿ ಜಮೀನಿನ ಮಾಲೀಕ ಹಾಗೂ ಸರಪಂಚ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತ ಮಂದೋರ್​ ರಾಜೇಂದ್ರ ದಿವಾಕರ್​ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯನ್ನ ಕಳೆದ ಫೆಬ್ರವರಿ 9ರಂದು ಅಪಹರಣ ಮಾಡಲಾಗಿದ್ದು, ದೆಹಲಿಗೆ ಕರೆದೊಯ್ದು ಅತ್ಯಾಚಾರವೆಸಗಲಾಗಿದೆ. ಜಸ್ವಂತ್​ ಸಿನ್ಹಾ ಎಂಬ ಪರಿಚಿತ ವ್ಯಕ್ತಿ ಆಕೆಯನ್ನ ತನ್ನೊಂದಿಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ದುಷ್ಕೃತ್ಯವೆಸಗಿದ್ದಾರೆ. ಇದಾದ ಬಳಿಕ ಫೋಟೋ ಮತ್ತು ವಿಡಿಯೋ ತೋರಿಸಿ ಹೆದರಿಸಲು ಪ್ರಾರಂಭಿಸಿದ್ದಾರೆ.

Edited By : Nagaraj Tulugeri
PublicNext

PublicNext

26/02/2021 08:26 pm

Cinque Terre

87.53 K

Cinque Terre

9

ಸಂಬಂಧಿತ ಸುದ್ದಿ