ಶ್ರೀನಗರ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಯ್ತು ಎಂಬ ಗಾದೆ ಮಾತು ಆಗಾಗ ಸಾಬೀತಾಗುತ್ತ ಇರುತ್ತೆ. ಆದ್ರೆ ಇಲ್ಲೊಬ್ಬ ಪೊಲೀಸಪ್ಪ ತನ್ನದೇ ಇಲಾಖೆಗೆ ಟೋಪಿ ಹಾಕಿ ಮೋಸ ಮಾಡಿದ್ದಾನೆ. ನಕಲಿ ದಾಖಲಾತಿ ಕೊಟ್ಟು ಇಲಾಖೆಯಿಂದ 5.53 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ.
ಜಮ್ಮು-ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿರುವ ಮಾಹಿತಿ ಪ್ರಕಾರ ಪೊಲೀಸ್ ಇಲಾಖೆಗೆ ಪಂಗನಾಮ ಹಾಕಿದ ಪೊಲೀಸ್ ಪೇದೆಯನ್ನು ರವಿ ಕುಮಾರ್ ಎಂದು ಗುರುತಿಸಲಾಗಿದೆ. ರವಿ ಕುಮಾರ್ ಇಲಾಖೆಗೆ ತನ್ನ ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ನಕಲಿ ದಾಖಲೆ ನೀಡಿ 5.53 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದರು. ಆದ್ರೆ ಇವರ ತಂದೆ ಸುಮಾರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರವಿ ಕುಮಾರ್ ಇಲಾಖೆಗೆ ಮಾಡಿರುವ ಮೋಸದ ಕುರಿತು ಮಾಹಿತಿ ಪಡದು ಈಗಾಗಲೇ ಮೀಸಲು ಶಸ್ತ್ರಾಸ್ರ ಪಡೆ ಕಾನೂನಿನ ಪ್ರಕಾರ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
PublicNext
19/02/2021 07:35 am