ಮುಂಬೈ: ಪಾಗಲ್ ಪ್ರೇಮಿಯೊಬ್ಬ ದೂರವಾದ ಗೆಳತಿಗೆ ಚಾಕು ಇರಿದು ಬರ್ಬರವಾಗಿ ಕೊಲೆಗೈದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯು ಮುಂಬೈನ ಕೆಇಎಂ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಳು. ರಾಜೇಶ್ ಕೇಲ್ (36) ಕೊಲೆ ಮಾಡಿದ ಆರೋಪಿ. ಇಬ್ಬರ ಮಧ್ಯೆ ವಿವಾಹೇತರ ಸಂಬಂಧ ಇತ್ತು. ಆದರೆ ಮಹಿಳೆಯು ರಾಜೇಶ್‌ನಿಂದ ದೂರವಾಗಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ರಾಜೇಶ್ ನಿನ್ನೊಂದಿಗೆ ಮಾತನಾಡಬೇಕು ಅಂತ ಹೇಳಿದ್ದ. ಅದರಂತೆ ಭಾನುವಾರ ಕೆಇಎಂ ಆಸ್ಪತ್ರೆಗೆ ಬಂದಿದ್ದ.
ರಾಜೇಶ್ ಹಾಗೂ ಮಹಿಳೆ ನಡುವೆ ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ಕೋಪಗೊಂಡ ರಾಜೇಶ್ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಗೆಳತಿಯ ಹೊಟ್ಟೆಗೆ ಎರಡ್ಮೂರು ಬಾರಿ ಇರಿದಿದ್ದಾನೆ. ಪರಿಣಾಮ ರಕ್ತಸ್ರಾವದಿಂದ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಜೇಶ್‌ನನ್ನು ಬಂಧಿಸಿದ್ದಾರೆ.
PublicNext
16/02/2021 05:48 pm