ಬೆಂಗಳೂರು : ನಿರ್ಮಾಣಗೊಂಡ ಕಟ್ಟಡಕ್ಕೆ ಸ್ವಾಧೀನಪತ್ರ (ಒಸಿ) ನೀಡಲು ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕನನ್ನು ಬಂಧಿಸಿದ್ದು, ಅಧಿಕಾರಿಯ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ನಗದು, 480ಕ್ಕೂ ಹೆಚ್ಚು ಕಡತಗಳನ್ನು ಜಪ್ತಿ ಮಾಡಿದ್ದಾರೆ.
ಸಹಾಯಕ ನಿರ್ದೇಶಕನಾಗಿರುವ ದೇವೇಂದ್ರಪ್ಪ ಎಂಬಾತನ ಮನೆ ಮೇಲೆ ಎಸಿಬಿ ದಾಳಿ ಮಾಡಿ ವಿಚಾರಣೆ ನಡೆಸಿದಾಗ, ಆತನ ಕಾರಿನಲ್ಲಿ ಬಿಬಿಎಂಪಿ ನಗರ ಯೋಜನೆ ಇಲಾಖೆಗೆ ಸೇರಿದ 50ಕ್ಕೂ ಹೆಚ್ಚು ಕಡತಗಳು, ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನಲ್ಲಿದ್ದ ಸೀಲ್, ಕಚೇರಿಯ ಸೀಲ್ ಹಾಗೂ ದಾಖಲೆಯಿಲ್ಲದ 7.40 ಲಕ್ಷ ರೂ. ನಗದು ಪತ್ತೆಯಾಗಿವೆ. ಆರೋಪಿ ಅಧಿಕಾರಿಯ ಮನೆಯಿಂದ ಇದುವರೆಗೆ ಒಟ್ಟು 27.40 ಲಕ್ಷ ರೂ. ಜಪ್ತಿ ಮಾಡಲಾಗಿದೆ.
PublicNext
09/02/2021 11:14 am