ಬೆಳಗಾವಿಯ: ನಿನ್ನೆಯಷ್ಟೆ ಬೆಳಗಾವಿಯ ಟಿಳಕವಾಡಿಯ "ಮಸ್ಯಾಜ್ ಹಾಗು ಸ್ಪಾ ಸೆಂಟರ" ನೆಪದಲ್ಲಿ ಹೈಟೆಕ್ ವೈಶ್ಯಾವಾಟಿಕೆ ಮಾಡುತ್ತಿದ್ದ ದಂದೆಕೊರ ಮೇಲೆ ಪೋಲಿಸರ ದಾಳಿ ಮಾಡಿ ಮೂವರ ಯುವತಿಯರನ್ನ ರಕ್ಷಣೆ ಮಾಡಿ ಇಬ್ಬರನ್ನ ಬಂದಿಸಿದ್ದರು.
ಬೆಳಗಾವಿ ನಗರ ಪೋಲಿಸರ ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಸ್ಪಾ ಸೆಂಟರ್ ಹೆಸರನಲ್ಲಿ ನಡೆಯುತ್ತಿರುವ ಈ ತೆರನಾದ ಕೃತ್ಯಗಳ ನಡೆಸುವ ಅಡ್ಢೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ಶನಿವಾರ ತಡ ರಾತ್ರಿ ಮತ್ತೊಂದು ಹೈಟೆಕ್ ವೈಶ್ಯಾವಾಟಿಕೆ ದಂದೆಯ ಜಾಲವನ್ನು ಭೇದಿಸಿದ್ದಾರೆ.
ನಗರದ ಸದಾಶಿವ ನಗರದ ಲಾಸ್ಟ್ ಬಸ್ ಸ್ಟಾಫ್ ಹತ್ತಿರ ಮಹಿಳೆಯ ಹೆಸರನಲ್ಲಿ ರೂಮ್ ಮಾಡಿ, ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಅನೈತಿಕ ದಂದೆ ಮಾಡುತ್ತಿದ್ದ ಇಬ್ಬರ ಪಿಂಪ್ ಗಳನ್ನ ಬಂದಿಸಿ ಅವರ ಜಾಲದಲ್ಲಿದ್ದ ಇಬ್ಬರ ಯುವತಿಯರನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಸದಾಶಿವ ನಗರ ಸೇರಿದಂತೆ ಇನ್ನು ಹಲವು ಏರಿಯಾಗಳಲ್ಲಿ ರೂಮ್ ಮಾಡಿ ದಂದೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ, ಶನಿವಾರ ತಡ ರಾತ್ರಿ ಬೆಳಗಾವಿ ಡಿಸಿಪಿ ವಿಕ್ರಮ್ ಆಮ್ಟೆ, ಅವರ ಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆಯ ಸಿಪಿಐ ಜಾವೇದ ಮುಶಾಪೂರೆ ಹಾಗು ಪಿಎಸ್ಐ ಮಂಜುನಾಥ ಭಂಜತ್ರಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ದಂದೆಯಲ್ಲಿ ತೊಡಗಿದ್ದ ಕಿರಾತಕರನ್ನ ರೆಡ್ ಹ್ಯಾಂಡ್ ಗಿ ಹಿಡಿದು ಬಂದಿಸಿದ್ದಾರೆ.
ಬೈಲಹೊಂಗಲದ ಮಾರುತಿ ಕೆಳಗೇರಿ(೩೦) ಮತ್ತು ಹುಕ್ಕೆರಿ ತಾಲೂಕಿನ ಸಿದ್ದಪ್ಪಾ ಚೌಗುಲಾ(೩೩) ಬಂದಿತಗೊಂಡ ಆರೋಪಿಗಳು. ಆರೋಪಿಗಳು ನಗರದ ಹಲವಡೆ ಈ ತರದ ದಂದೆ ಮಾಡುತ್ತಿದ್ದಿರಿಂದ ಬಂದಿತ ಅಪಾರ ಪ್ರಮಾಣದ ಕಾಂಡೊಮ್ಸ್ ಸೇರಿದಂತೆ ವೈಶ್ಯಾವಾಟಿಕೆ ದಂದೆಗೆ ಬಳುಸಿತ್ತಿದ್ದ ವಸ್ತುಗಳು ಮತ್ತು ದಂದೆಗಾಗಿ ಉಪಯೋಗ ಮಾಡುತ್ತಿದ್ದ ಸ್ವಿಫ್ಟ್ ಕಾರ(KA:N 5568) ಜಪ್ತಿ ಮಾಡಿದ್ದಾರೆ.
ಈ ಯಶಸ್ವಿ ಪೋಲಿಸ ಕಾರ್ಯಚಾರಣೆಯಲ್ಲಿ ತೊಡಗಿದ್ದ ಪೋಲಿಸರಿಗೆ ಪೋಲಿಸ ಆಯುಕ್ತ, ಮತ್ತು ಉಪ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
ಇದೇ ವೇಳೆ ಈ ತೆರನಾದ ಕೃತ್ಯಗಳಲ್ಲಿ ತೊಡಗಿದವರ ಬಗ್ಗೆ ಮಾಹಿತಿ ಸಿಕ್ಕರೆ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಡಿಸಿಪಿ ವಿಕ್ರಮ್ ಆಮ್ಟೆಯವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
PublicNext
07/02/2021 04:55 pm