ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕ್ ಡೌನ್ ಎಫೆಕ್ಟ್ : ಹೋಟೆಲ್ ಮಾಲೀಕ ಆತ್ಮಹತ್ಯೆ

ಮಡಿಕೇರಿ: ಡೆಡ್ಲಿ ಸೋಂಕು ಕೊರೊನಾದಿಂದಾಗಿ ದೇಶದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಠಿಯಾಗಿದೆ. ಹೋಟೆಲ್ ಉದ್ಯಮಕ್ಕಂತೂ ಸಾಕಷ್ಟು ಹೊಡೆತ ಬಿದ್ದಿದೆ.

ಅನ್ ಲಾಕ್ ಆದರೂ ಕೂಡಾ ಹೋಟೆಲ್ ಉದ್ಯಮ ಿನ್ನು ಸುಧಾರಣೆಯ ಹಂತದಲ್ಲಿದೆ. ಸದ್ಯ ಹೋಟೆಲ್ ಮಾಲೀಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಸ್ಟ್ರಿಯಲ್ ಎಸ್ಟೇಟ್ ರಸ್ತೆಯ ಬಳಿ ನಡೆದಿದೆ. ಮೃತ ದುರ್ದೈವಿ ಪ್ರವೀಣ್ (34) ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರವೀಣ್ ಚಿಕ್ಕಮಗಳೂರಿನ ರೆಸಾರ್ಟ್ ಮ್ಯಾನೇಜರ್ ಆಗಿದ್ದರು. ಕೊರೊನಾ ಲಾಕ್ ಡೌನ್ನಿಂದಾಗಿ ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಇದ್ದ. ಹಾಗಾಗಿ ಮೂರು ತಿಂಗಳ ಹಿಂದೆ ಮಡಿಕೇರಿಯಲ್ಲಿ ಹೋಟೆಲ್ ಆರಂಭಿಸಿದ್ದರು. ಆದರೂ, ಪ್ರವೀಣ್ ಜೀವನ ನಡೆಸಲು ಕಷ್ಟವಾಗುತ್ತಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರವೀಣ್ ಹೋಟೆಲ್ ಹಿಂಬದಿಯಲ್ಲಿದ್ದ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಡಿಕೇರಿಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

23/01/2021 03:17 pm

Cinque Terre

63.45 K

Cinque Terre

2