ಮೈಸೂರು: ಬಸ್ ಓವರ್ ಟೇಕ್ ಮಾಡಲು ಬಿಡದ ಕೆಎಸ್ಆರ್ಟಿಸಿ ಚಾಲಕನ ಮೇಲೆ ಬೈಕ್ ಸವಾರನೋರ್ವ ಚಾಕುವಿನಿಂದ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಇದರಿಂದ ಬಸ್ ಚಾಲಕ ಭೀಕರ ಹಲ್ಲೆಗೊಳಗಾಗಿದ್ದಾನೆ. ಹುಣಸೂರು ತಾಲೂಕು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸರಾಮನಹಳ್ಳಿ ಬಳಿ ನಡೆದಿದೆ. ಪಿರಿಯಾಪಟ್ಟಣ ಡಿಪೋ ಸಾರಿಗೆ ಚಾಲಕ ವೆಂಕಟೇಶ್ ಹಲ್ಲೆಗೊಳಗಾಗಿದ್ದಾನೆ.
ಕೆ.ಆರ್.ನಗರಕ್ಕೆ ಬಸ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಹೊಸರಾಮನಹಳ್ಳಿ ಗೇಟ್ ಬಳಿ ಬೈಕ್ ಸವಾರನಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡು ಬೈಕ್ ಸವಾರ ಬಸ್ ನಿಲ್ಲಿಸುವಂತೆ ಹೇಳಿದ್ದಾನೆ. ಈ ವೇಳೆ ಬಸ್ನಿಂದ ಇಳಿದ ಡ್ರೈವರ್ ವೆಂಕಟೇಶ್ ಹಾಗೂ ಬೈಕ್ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ.
ಇದರಿಂದ ಆಕ್ರೋಶಗೊಂಡ ಬೈಕ್ ಸವಾರ ಸಾರ್ವಜನಿಕರ ಸಮ್ಮುಖದಲ್ಲಿ ಚಾಕುವಿನಿಂದ ಇರಿದಿದ್ದಾನೆ. ಈ ವಿಡಿಯೋ ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಗಾಯಾಳು ವೆಂಕಟೇಶ್ ಖಾಸಗಿ ಆಸ್ಪತ್ರೆಗೆ ದಾಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ.
PublicNext
22/01/2021 11:08 pm