ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೈಂಗಿಕ ತಜ್ಞೆ ಡಾ. ಪದ್ಮಿನಿ ಹೆಸರಿಲ್ಲಿ ನಕಲಿ ಖಾತೆ: ಮುಂದೆ ಆಗಿದ್ದೇನು?

ಬೆಂಗಳೂರು: ಖ್ಯಾತ ಲೈಂಗಿಕ ತಜ್ಞೆ ಡಾ. ಪದ್ಮಿನಿ ಪ್ರಸಾದ್‌ ಅವರ ಹೆಸರಿನಲ್ಲಿ ಖದೀಮರು ನಕಲಿ ಫೇಸ ಬುಕ್ ಖಾತೆ ತೆರೆದಿದ್ದಾರೆ. ಅದೇ ಖಾತೆಯ ಮೂಲಕ ಮಹಿಳೆಯರಿಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿ ನಿಮ್ಮ ಲೈಂಗಿಕ ಸಮಸ್ಯೆಗಳ ಕುರಿತು ಆಪ್ತ ಸಮಾಲೋಚನೆ ಮಾಡೋದಾಗಿ ನಂಬಿಸಿದ್ದಾರೆ. ಅಲ್ಲದೇ ಮಹಿಳೆಯರ ಗುಪ್ತಾಂಗದ ಫೋಟೋ ಕಳಿಸುವಂತೆ ಕೇಳಿದ್ದಾರೆ. ಈ ಮೂಲಕ ಅಮಾಯಕರಿಗೆ ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಅನುಮಾನ ಬಂದ ತಕ್ಷಣ ಡಾ. ಪದ್ಮಿನಿ ಪ್ರಸಾದ್ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಡಾ. ಪದ್ಮಿನಿ ಅವರ ಅಸಲಿ ಖಾತೆಯಲ್ಲಿನ ಫೋಟೊಗಳನ್ನು ಎತ್ತಿಕೊಂಡಿರುವ ಖದೀಮರು, ನಕಲಿ ಖಾತೆ ಸೃಷ್ಟಿಸಿ ವೃತ್ತಿಯನ್ನು ಸೆಕ್ಸಾಲಜಿಸ್ಟ್‌ ಎಂದು ಬರೆದುಕೊಂಡಿದ್ದಾರೆ. ನಕಲಿ ಖಾತೆಯಿಂದ ನೂರಾರು ಮಹಿಳೆಯರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಲಾಗಿದೆ. ರಿಕ್ವೆಸ್ಟ್‌ ಆ್ಯಕ್ಸೆಪ್ಟ್‌ ಮಾಡಿದವರ ಜೊತೆ ನಕಲಿ ಖಾತೆ ವ್ಯಕ್ತಿ ಲೈಂಗಿಕ ವಿಚಾರಗಳ ಕುರಿತು ಚಾಟಿಂಗ್‌ ಮಾಡಿದ್ದಾರೆ. ಅಲ್ಲದೇ, ಖಾಸಗಿ ಭಾಗಗಳ ವಿಡಿಯೊ ಮತ್ತು ಫೋಟೊ ತೆಗೆದು ಕಳುಹಿಸಿ ಎಂದಿದ್ದೂ ಅಲ್ಲದೇ ಪೋನ್‌ ನಂಬರ್‌ ಕೊಡಿ ಎಂದೂ ಕೇಳಿದ್ದಾರೆ. ಇದರಿಂದ ಅನುಮಾನಗೊಂಡು, ಡಾ. ಪದ್ಮಿನಿ ಅವರನ್ನು ಪೋನ್‌ ಮೂಲಕ ಸಂಪರ್ಕಿಸಿದಾಗ ಚಾಟಿಂಗ್‌ ಮಾಡಿದವರು ನಕಲಿ ವ್ಯಕ್ತಿ ಎಂದು ಗೊತ್ತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪದ್ಮಿನಿ ಪ್ರಸಾದ್‌ ''ನಾನು ಆನ್‌ಲೈನ್‌ ಸೇರಿದಂತೆ ಜಾಲತಾಣಗಳ ಮೂಲಕ ಯಾವುದೇ ಕನ್ಸಲ್ಟೇಷನ್‌ ಮಾಡುವುದಿಲ್ಲ. ಕ್ಲಿನಿಕ ನಲ್ಲಿ ನೇರ ಭೇಟಿಯ ಮೂಲಕವಷ್ಟೇ ಆರೋಗ್ಯ ಸಲಹೆ ಹಾಗೂ ಚಿಕಿತ್ಸೆ ನೀಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

02/01/2021 10:05 am

Cinque Terre

76.19 K

Cinque Terre

1

ಸಂಬಂಧಿತ ಸುದ್ದಿ