ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಶ್ಚಟಕ್ಕಾಗಿ ಹೆತ್ತ ತಾಯಿ ಮೇಲೆ ಬಾಲಕನಿಂದ ಹಲ್ಲೆ; ಡ್ರಗ್ಸ್ ಖರೀದಿಸಲು ಹಣಕ್ಕಾಗಿ ರಂಪಾಟ, ವಿಡಿಯೋ ವೈರಲ್

ಕೇರಳ: ಒಂದು ಕಾಲದಲ್ಲಿ ಅತಿ ಹೆಚ್ಚು ಮದ್ಯದ ಗ್ರಾಹಕವಾಗಿದ್ದ ಕೇರಳ ಈಗ ಭಾರತದ ಡ್ರಗ್ ಕ್ಯಾಪಿಟಲ್ ಆಗಿ ಮಾರ್ಪಟ್ಟಿದೆ. ಡ್ರಗ್ಸ್ ಖರೀದಿಸಲು ಹಣ ಕೊಡಲಿಲ್ಲ ಎಂದು ತನ್ನ ತಾಯಿಯ ಮೇಲೆ ಸಣ್ಣ ಬಾಲಕನೊಬ್ಬ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ.

2022ರಲ್ಲಿ ಇಲ್ಲಿಯವರೆಗೆ 16,000ಕ್ಕೂ ಹೆಚ್ಚು ಮಾದಕವಸ್ತು ಪ್ರಕರಣಗಳು ವರದಿಯಾಗಿವೆ. ಬಾಳಿ ಬದುಕಬೇಕಾದ ಯುವಕರು, ಮಕ್ಕಳು ಹೇಗೆ ದುಶ್ಚಟಕ್ಕೆ ಬಲಿಯಾಗಿದ್ದರೆ ಎಂದರೆ, ಬಾಲಕನೊಬ್ಬ ಡ್ರಗ್ಸ್ ಖರೀದಿಸಲು ಹಣ ಕೊಡದ ತನ್ನ ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ತಾಯಿಗೇ ಏನಾದರೂ ಏನೆಂತೆ, ತನಗೆ ಡ್ರಗ್ಸ್ ಖರೀದಿಸಲು ಹಣ ಬೇಕು ಅಷ್ಟೇ ಎಂಬ ಮನಸ್ಥಿತಿ ಆತನಲ್ಲಿ ಬೆಳೆದಂತಿದೆ.

ಬಡತನದಲ್ಲಿ ಜೀವನ ಸಾಗಿಸುತ್ತಿರುವ ಮಹಿಳೆಯೊಬ್ಬಳ ಮಗ ದುಶ್ಚಟಕ್ಕೆ ಬಲಿಯಾಗಿದ್ದಾನೆ. ತನ್ನ ದುಶ್ಚಟದ ದಾಹ ತೀರಿಸಿಕೊಳ್ಳಲು ಮಗ ತನ್ನ ತಾಯಿಯ ಬಳಿಯೇ ಹಣಕ್ಕಾಗಿ ಪೀಡಿಸುತ್ತಾನೆ. ಹಣ ಕೊಡಲ್ಲ ಎಂದಿದ್ದಕ್ಕೆ ತಾಯಿಯ ಮೇಲೆಯೇ ಕೈ, ಕಾಲಿನಿಂದ ಹಲ್ಲೆ ನಡೆಸಿದ್ದಾನೆ. ಮಗನ ಕಾಟವನ್ನು ಎಷ್ಟು ಅಂತಾ ಸಹಿಸುವುದು? ಮಗನ ಕಿರುಚಾಟದ ನಡುವೆ ಕೊಡಪಾನ ಹಿಡಿದುಕೊಂಡು ಮಗನನ್ನು ಥಳಿಸಲು ಮುಂದಾಗುವ ಮೂಲಕ ಪ್ರತಿರೋಧ ಒಡ್ಡುತ್ತಾಳೆ.

ಕೇರಳದಲ್ಲಿ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿಪಕ್ಷ ಯುಡಿಎಫ್ ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಹಾವಳಿ ತಡೆಯಲು ಜಂಟಿಯಾಗಿ ಕಣಕ್ಕಿಳಿದಿವೆ. ದುಶ್ಚಟಗಳನ್ನು ತಡೆಯಲು ವಿಧಾನಸಭೆಯಲ್ಲಿ ಸಿಎಂ ಪಿಣರಾಯ್ ವಿಜಯನ್ ಕಠಿಣ ಕ್ರಮಗಳನ್ನು ಘೋಷಿಸಿದ್ದಾರೆ.

ಇದರಲ್ಲಿ, ನಿತ್ಯದ ಅಪರಾಧಿಗಳನ್ನು ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಬಂಧನದಲ್ಲಿಡುವುದು, ಎನ್‌ಡಿಪಿಎಸ್ ಕಾಯ್ದೆಯಡಿ ಶಿಕ್ಷೆಗೆ ಒಳಗಾದವರ ಡೇಟಾ ಬ್ಯಾಂಕ್ ಸಿದ್ಧಪಡಿಸುವುದು ಮತ್ತು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳು ಸೇರಿವೆ. ಈ ವಿಡಿಯೋವನ್ನು ನಚಿಕೇತಸ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, '

Edited By : Abhishek Kamoji
PublicNext

PublicNext

04/09/2022 05:48 pm

Cinque Terre

162.84 K

Cinque Terre

6