ಲಖ್ನೋ: ದೇವರು ಮತ್ತು ದೇವತೆಗಳ ಚಿತ್ರಗಳಿರುವ ನ್ಯೂಸ್ ಪೇಪರ್‌ನಲ್ಲಿ ಕೋಳಿ ಮಾಂಸ ಕಟ್ಟಿ ಕೊಡುತ್ತಿದ್ದ ಎಂದು ಆರೋಪಿಸಿ ಹೋಟೆಲ್ ನಿರ್ವಾಹಕರೊಬ್ಬರನ್ನು ಉತ್ತರಪ್ರದೇಶದ ಸಂಭಾಲ್ ನಗರದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ತಾಲಿಬ್ ಹುಸೇನ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ, ಸಂಭಾಲ್ ಕೊತ್ವಾಲಿ ಪ್ರದೇಶದಲ್ಲಿ ತಾಲಿಬ್ ಹುಸೇನ್ ಎಂಬ ವ್ಯಕ್ತಿ ತನ್ನ ಹೋಟೆಲ್‌ನಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳಿರುವ ಪೇಪರಿನಲ್ಲಿ ಕೋಳಿ ಮಾಂಸ ಕಟ್ಟಿ, ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಬಂದಿತ್ತು. ತನಿಖೆ ವೇಳೆ ತಾಲಿಬ್ ಪೊಲೀಸ್ ತಂಡದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಐಪಿಸಿ ಸೆಕ್ಷನ್ 153 'ಎ' (ಹಗೆತನವನ್ನು ಉತ್ತೇಜಿಸುವುದು), 295 ಎ (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳಕ್ಕೆ ಹಾನಿ ಮಾಡುವುದು ಅಥವಾ ಅಪವಿತ್ರಗೊಳಿಸುವುದು), ಸೆಕ್ಷನ್ 353, ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ, ಸ್ಥಳದಿಂದ ದೇವತೆಗಳ ಚಿತ್ರಗಳಿರುವ ಪೇಪರ್‌ಗಳು ಮತ್ತು ದಾಳಿಗೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ.
PublicNext
05/07/2022 10:21 am