ವಿಜಯಪುರ: ಮುಳುಗಡೆ ಆದ ಸೇತುವೆ ಮೇಲೆ ಕಾರು, ಟೆಂಪೊ, ಬೈಕ್ ಸವಾರರು ರಿಸ್ಕ್ ತೆಗೆದುಕೊಂಡು ವಾಹನ ಚಲಾಯಿಸಿದ್ದನ್ನು ನೋಡಿದ್ದೇವೆ. ಈ ವೇಳೆ ಕೆಲವು ದುರಂತಗಳು ಆಗಿದ್ದನ್ನೂ ನೋಡಿದ್ದೇವೆ. ಈಗ ಆ ಪಟ್ಟಿಗೆ ಸರ್ಕಾರಿ ಸಾರಿಗೆ ಬಸ್‌ನ ಚಾಲಕನೂ ಸೇರಿದ್ದಾನೆ.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲ್ಲೂಕಿನ ಸಾತಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ರಭಸದಿಂದ ಹರಿಯುತ್ತಿರುವ ನೀರನ್ನು ಲೆಕ್ಕಿಸದೇ ಸಾರಿಗೆ ಬಸ್ ಚಾಲಕ ಸೇತುವೆ ಮೇಲೆ ಬಸ್ ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಸೇತುವೆಯ ಒಂದು ಬದಿ ವಾಲಿಕೊಂಡಿದೆ. ಹರಸಾಹಸ ಪಟ್ಟ ಚಾಲಕ ಹೇಗೋ ಏನೋ ಬಸ್ಸನ್ನು ದಡಕ್ಕೆ ತಂದಿದ್ದಾನೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ ಚಾಲಕನಿಗೆ ಪ್ರಯಾಣಿಕರು ಚಳಿ ಬಿಡಿಸಿದ್ದಾರೆ.
PublicNext
06/08/2022 02:51 pm